ADVERTISEMENT

ಮೆಕ್ಸಿಕೊದಲ್ಲಿ ಪ್ರಪಾತಕ್ಕೆ ಉರುಳಿದ ಬಸ್‌: 17 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2023, 13:13 IST
Last Updated 4 ಆಗಸ್ಟ್ 2023, 13:13 IST
 ಅಪಘಾತ
ಅಪಘಾತ   

ಮೆಕ್ಸಿಕೊ ಸಿಟಿ (ಪಿಟಿಐ): ‘ಮೆಕ್ಸಿಕೊ ಸಿಟಿಯಿಂದ ಟಿಜುವಾನಾ ಕಡೆಗೆ ತೆರಳುತ್ತಿದ್ದ ಬಸ್ಸೊಂದು ಕಡಿದಾದ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ ಕನಿಷ್ಠ 17 ಪ್ರಯಾಣಿಕರು ಸಾವಿಗೀಡಾಗಿರುವ ಘಟನೆ ನಯಾರಿಟ್‌ ರಾಜ್ಯದ ರಾಜಧಾನಿ ಟೆಪಿಕ್‌ ಬಳಿ ಗುರುವಾರ ನಡೆದಿದೆ’ ಎಂದು ಮೆಕ್ಸಿಕೊದ ಅಧಿಕಾರಿಗಳು ತಿಳಿಸಿದ್ದಾರೆ.

‘ಬಸ್‌ನಲ್ಲಿ ಸಿಲುಕಿರುವ ಜನರನ್ನು ಹೊರತರಲು ರಕ್ಷಣಾ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಈಗ ದೊರೆತಿರುವುದು ಕೇವಲ ಪ್ರಾಥಮಿಕ ಮಾಹಿತಿಯಷ್ಟೇ. ಬಸ್‌ನಲ್ಲಿ ಒಟ್ಟು 22 ಮಂದಿ ಪ್ರಯಾಣಿಸುತ್ತಿದ್ದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT