ADVERTISEMENT

ಗಾಜಾ | ಇಸ್ರೇಲ್‌ ದಾಳಿ: 31 ನಾಗರಿಕರು ಸಾವು

ಏಜೆನ್ಸೀಸ್
Published 1 ಜೂನ್ 2025, 16:13 IST
Last Updated 1 ಜೂನ್ 2025, 16:13 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರಫಾ: ಗಾಜಾಪಟ್ಟಿಯಲ್ಲಿ ಇಸ್ರೇಲ್‌ ಸೇನೆಯು ನಡೆಸಿದ ದಾಳಿಯಲ್ಲಿ ನಡೆಸಿದ್ದು, 31 ಜನರು ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ.

ಆಹಾರ ಸ್ವೀಕರಿಸಲು ತೆರಳುತ್ತಿದ್ದ ಜನರ ಗುಂಪಿನ ಮೇಲೆ ದಾಳಿ ನಡೆದಿದೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. 

ADVERTISEMENT

ಮಾನವೀಯ ನೆರವು ವಿತರಣಾ ಕೇಂದ್ರದ ಬಳಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಇಸ್ರೇಲ್‌ ಸೇನೆ ತಿಳಿಸಿದೆ. ಅಲ್ಲದೇ ನಾಗರಿಕರ ಮೇಲೆ ಇಸ್ರೇಲ್‌ ಸೇನೆ ದಾಳಿ ನಡೆಸಿದೆ ಎನ್ನುವುದನ್ನು ತಳ್ಳಿ ಹಾಕಿದೆ.

ಸ್ಥಳದಲ್ಲಿ ಯಾವುದೇ ಗುಂಡಿನ ದಾಳಿ ಭಾನುವಾರ ನಡೆದಿಲ್ಲ ಎಂದು ಆಹಾರ ವಿತರಿಸುತ್ತಿದ್ದ ಸಂಸ್ಥೆಯು ಹೇಳಿದೆ. ಇದು ಇಸ್ರೇಲ್‌ ಬೆಂಬಲಿತ ಸಂಸ್ಥೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.