ಮೆಕ್ಸಿಕೊ : ಇಲ್ಲಿನ ಮಾದಕ ದ್ರವ್ಯ ವ್ಯಸನ ಪುನರ್ವಸತಿ ಕೇಂದ್ರದ ಮೇಲೆ ಗುಂಡಿನ ದಾಳಿ ನಡೆಸಿದ ಬಂದೂಕುಧಾರಿಗಳು 24 ಮಂದಿಯನ್ನು ಕೊಂದಿದ್ದಾರೆ. ಈ ವೇಳೆ ಏಳು ಜನರು ಗಾಯಗೊಂಡಿದ್ದಾರೆ.
ಇರಾಪುವಾಟೊ ನಗರದಲ್ಲಿನ ನೋಂದಾಯಿತವಲ್ಲದ ಪುನರ್ವಸತಿ ಕೇಂದ್ರದ ಮೇಲೆ ಬುಧವಾರ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುನರ್ವಸತಿ ಕೇಂದ್ರದಲ್ಲಿದ್ದ ಬಹುತೇಕರ ಮೇಲೆ ದಾಳಿಕೋರರು ಗುಂಡು ಹಾರಿಸಿದ್ದಾರೆ. ಆದರೆ ಯಾರನ್ನೂ ಅಪಹರಿಸಿಲ್ಲ. ಗಾಯಗೊಂಡಿರುವ ಏಳು ಜನರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದಾಳಿಗೆ ಯಾವುದೇ ನಿರ್ದಿಷ್ಟ ಉದ್ದೇಶ ಇದ್ದಂತಿಲ್ಲ. ಆದರೆ ಮಾದಕ ವಸ್ತು ದಂಧೆ ನಡೆಸುವ ಭೂಗತ ಗುಂಪುಗಳು ದಾಳಿಯಲ್ಲಿ ಭಾಗಿಯಾಗಿರಬಹುದು ಎಂದು ಗವರ್ನರ್ ಡಿಯಾಗೊ ಸಿನ್‌ಹುಯಿ ಶಂಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.