ADVERTISEMENT

ಮ್ಯಾನ್ಮಾರ್‌: ಎನ್‌ಎಲ್‌ಡಿ ಪಕ್ಷದ ಪ್ರಧಾನ ಕಚೇರಿ ಮೇಲೆ ಸೇನೆ ದಾಳಿ

ಏಜೆನ್ಸೀಸ್
Published 10 ಫೆಬ್ರುವರಿ 2021, 11:21 IST
Last Updated 10 ಫೆಬ್ರುವರಿ 2021, 11:21 IST

ಯಾಂಗೂನ್‌: ಮ್ಯಾನ್ಮಾರ್‌ನ ಮಿಲಿಟರಿ ಪಡೆಯು ಯಾಂಗೂನ್‌ನಲ್ಲಿರುವ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷದ ಪ್ರಧಾನ ಕಚೇರಿಯ ಬೀಗವನ್ನು ಮಂಗಳವಾರ ರಾತ್ರಿ ಮುರಿದು, ಬಾಗಿಲುಗಳನ್ನು ಒಡೆದು ಕಚೇರಿಯನ್ನು ಧ್ವಂಸಗೊಳಿಸಿದೆ.

ಮಿಲಿಟರಿ ಪಡೆಯ ಈ ದಾಳಿಯ ದೃಶ್ಯವನ್ನು ಕಚೇರಿಯ ಕಾವಲುಗಾರರು ಸಿಸಿಟಿವಿ ಕ್ಯಾಮೆರಾಗಳ ಮೂಲಕ ವೀಕ್ಷಿಸಿದರೂ ಅಸಹಾಯಕರಾಗಿದ್ದರು.

‘ವಿಷಯ ಗೊತ್ತಾದ ಕೂಡಲೇ ಸ್ಥಳಕ್ಕೆ ಹೋಗಲು ಮುಂದಾದೆವು, ಆದರೆ ಮಿಲಿಟರಿ ಆಡಳಿತ ಕರ್ಫ್ಯೂ ಹೇರಿದ್ದ ಕಾರಣ ಹೋಗಲಾಗಲಿಲ್ಲ’ ಎಂದು ಪಕ್ಷದ ಪ್ರಧಾನ ಕಚೇರಿಯ ಉಸ್ತುವಾರಿ ಸೋ ವಿನ್ ತಿಳಿಸಿದ್ದಾರೆ.

ADVERTISEMENT

‘ಮಿಲಿಟರಿ ಸರ್ವಾಧಿಕಾರಿ ದಾಳಿ ನಡೆಸಿ ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ’ ಎಂದು ಎನ್‌ಎಲ್‌ಡಿ ದೂರಿದೆ. ಕಳೆದ ವಾರವಷ್ಟೇ ನಾಯಕಿ ಆಂಗ್‌ ಸಾನ್‌ ಸೂಕಿ ಅವರನ್ನು ದಂಗೆಯ ಮೂಲಕ ಸೇನೆ ಪದಚ್ಯುತಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.