ADVERTISEMENT

ಕಾಬೂಲ್ ವಿಮಾನ ನಿಲ್ಧಾಣದಲ್ಲಿ ಭಯೋತ್ಪಾದಕ ದಾಳಿ ಸಾಧ್ಯತೆ: ಆಸ್ಟ್ರೇಲಿಯಾ ಎಚ್ಚರಿಕೆ

ಏಜೆನ್ಸೀಸ್
Published 26 ಆಗಸ್ಟ್ 2021, 6:40 IST
Last Updated 26 ಆಗಸ್ಟ್ 2021, 6:40 IST
ಆಸ್ಟ್ರೇಲಿಯ ರಾಷ್ಟ್ರಧ್ವಜ–ಸಾಂದರ್ಭಿಕ ಚಿತ್ರ
ಆಸ್ಟ್ರೇಲಿಯ ರಾಷ್ಟ್ರಧ್ವಜ–ಸಾಂದರ್ಭಿಕ ಚಿತ್ರ   

ಕ್ಯಾನ್‌ಬೆರಾ: ಅಫ್ಗಾನಿಸ್ತಾನದ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿರುವ ಆಸ್ಟ್ರೇಲಿಯಾ ಸರ್ಕಾರವು ತನ್ನ ನಾಗರಿಕರಿಗೆ ಕಾಬೂಲ್‌ ವಿಮಾನ ನಿಲ್ದಾಣಕ್ಕೆ ತೆರಳದಂತೆ ಗುರುವಾರ ಸಲಹೆ ನೀಡಿದೆ.

ಕಾಬೂಲ್‌ ವಿಮಾನದ ಸುತ್ತಮುತ್ತಲ ಪ್ರದೇಶದಲ್ಲಿರುವ ಆಸ್ಟ್ರೇಲಿಯನ್ನರಿಗೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸರ್ಕಾರವು ಸೂಚಿಸಿದೆ.

‘ಆಸ್ಟ್ರೇಲಿಯಾವು ಕಳೆದ ವಾರದ ಬುಧವಾರದಿಂದ 4,000 ಮಂದಿಯನ್ನು ಸ್ಥಳಾಂತರಿಸಿದೆ’ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಅವರು ತಿಳಿಸಿದರು.

ADVERTISEMENT

‘ನಾವು ಅಂದಾಜಿಸಿದ್ದಕ್ಕಿಂತ ಹೆಚ್ಚಿನ ಜನರನ್ನು ಸ್ಥಳಾಂತರಿಸಿದ್ದೇವೆ. ಅಲ್ಲಿ ಅತ್ಯಂತ ಅಪಾಯಕಾರಿ ವಾತಾವರಣವಿದೆ. ದಿನದಿಂದ ದಿನಕ್ಕೆ ಅಪಾಯವು ಹೆಚ್ಚುತ್ತಿದೆ. ಹಾಗಾಗಿ ಸ್ಥಳಾಂತರ ಪ್ರಕ್ರಿಯೆಯನ್ನು ತೀವ್ರಗೊಳಿಸಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.