ADVERTISEMENT

ಫೆ.21ರಿಂದ ಪ್ರವಾಸಿಗರಿಗೆ ಆಸ್ಟ್ರೇಲಿಯಾ ಮುಕ್ತ

ಏಜೆನ್ಸೀಸ್
Published 7 ಫೆಬ್ರುವರಿ 2022, 13:20 IST
Last Updated 7 ಫೆಬ್ರುವರಿ 2022, 13:20 IST
   

ಕ್ಯಾನ್‌ಬೆರಾ: ಲಸಿಕೆ ಪಡೆದ ಪ್ರವಾಸಿಗರಿಗೆ ಹಾಗೂ ಉದ್ಯಮಿಗಳಿಗೆ ಫೆ.21ರಿಂದ ಆಸ್ಟ್ರೇಲಿಯಾ ಗಡಿಯನ್ನು ಮುಕ್ತಗೊಳಿಸುವುದಾಗಿ ಸರ್ಕಾರ ಘೋಷಿಸಿದೆ.

2020ರ ಮಾರ್ಚ್‌ನಲ್ಲಿ ಜಗತ್ತಿನಲ್ಲೇ ಅತಿ ಕಠಿಣ ಕೋವಿಡ್‌ ನಿಯಮಗಳನ್ನು ಹೇರಿದ್ದಆಸ್ಟ್ರೇಲಿಯಾ ಸೋಮವಾರ ಹಲವುಸಡಿಲಿಕೆಗಳನ್ನು ಪ್ರಕಟಿಸಿದೆ. ದೇಶದಲ್ಲಿ ಲಸಿಕೆ ಪಡೆದವರ ಪ್ರಮಾಣ ಏರಿಕೆಯಾದ ಹಿನ್ನೆಲೆಯಲ್ಲಿ ಕಳೆದ ನವಂಬರ್‌ನಲ್ಲಿ ಗಡಿ ನಿರ್ಬಂಧವನ್ನು ಸಡಿಲಗೊಳಿಸಿತ್ತು. ಆಗ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಹಾಗೂ ಉದ್ಯೋಗ ವಲಸಿಗರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಫೆ.21ರಿಂದ ವೀಸಾ ಮತ್ತು ಲಸಿಕೆ ಪಡೆದ ಎಲ್ಲಾ ಪ್ರವಾಸಿಗರಿಗೂ ಗಡಿ ತೆರೆಯಲಾಗುತ್ತಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸಸ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.