ADVERTISEMENT

ಆಸ್ಟ್ರೇಲಿಯಾ: 98.02 ಲಕ್ಷ ಕೋಟಿ ಪ್ಯಾಕೆಜ್‌ ಘೋಷಣೆ

ಪಿಟಿಐ
Published 30 ಮಾರ್ಚ್ 2020, 21:09 IST
Last Updated 30 ಮಾರ್ಚ್ 2020, 21:09 IST
ಸ್ಕಾಟ್‌ ಮಾರಿಸನ್‌
ಸ್ಕಾಟ್‌ ಮಾರಿಸನ್‌   

ಮೆಲ್ಬರ್ನ್‌, ಆಸ್ಟ್ರೇಲಿಯಾ:ಕೊರೊನಾ ಸೋಂಕಿನಿಂದ ತತ್ತರಿಸಿರುವ ಜನರಿಗೆ ಆರ್ಥಿಕ ಚೇತರಿಕೆ ನೀಡುವ ನಿಟ್ಟಿನಲ್ಲಿ ಪ್ರಧಾನಿಸ್ಕಾಟ್‌ ಮಾರಿಸನ್‌ 98.02 ಲಕ್ಷ ಕೋಟಿ (130 ಬಿಲಿಯನ್‌ ಡಾಲರ್‌) ವಿಶೇಷ ಪ್ಯಾಕೆಜ್‌ ಘೋಷಿಸಿದ್ದಾರೆ.

ಪ್ರತಿ ಉದ್ಯೋಗಿಗೆ ನಿರ್ದಿಷ್ಟ ವೇತನ ಸಹಾಯಧನ ನೀಡಲು ಕ್ರಮ ವಹಿಸಲಾಗಿದೆ.

‘ಹಿಂದೆಂದೂ ಕಂಡಿರದ ಸಂಕಷ್ಟದ ಪರಿಸ್ಥಿತಿಯಲ್ಲಿ ನಾವಿಂದು ಇದ್ದೇವೆ. ಈ ವೇತನ ಸಹಾಯ ಧನ ಆರ್ಥಿಕ ಸಂಕಷ್ಟದಲ್ಲಿರುವ ಉದ್ದಿಮೆಗಳಿಗೆ ನೆರವಾಗಲಿದೆ’ ಎಂದು ಪ್ರಧಾನಿ ತಿಳಿಸಿದ್ದಾರೆ.

ADVERTISEMENT

ದೇಶದಾದ್ಯಂತ ನಾಲ್ಕು ಸಾವಿರ ಮಂದಿಗೆ ಸೋಂಕು ತಗುಲಿದ್ದು, ಹದಿನೆಂಟು ಮಂದಿ ಮೃತಪಟ್ಟಿದ್ದಾರೆ. ಭಾನುವಾರದಿಂದ ಇಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಮಗಳನ್ನು ಬಿಗಿಗೊಳಿಸಲಾಗಿದ್ದು,70 ವರ್ಷಕ್ಕಿಂತ ಮೇಲ್ಪಟ್ಟವರು ಮನೆಯಲ್ಲಿಯೇ ಇರಬೇಕೆಂದು ಕಟ್ಟುನಿಟ್ಟಾಗಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.