ADVERTISEMENT

ಬ್ರಿಟನ್‌ ಸಂಸದ ಡೇವಿಡ್ ಆಮೆಸ್ಸ್ ಹತ್ಯೆ: ಭಯೋತ್ಪಾದಕ ಕೃತ್ಯ ಎಂದ ಲಂಡನ್ ಪೊಲೀಸ್

ಏಜೆನ್ಸೀಸ್
Published 16 ಅಕ್ಟೋಬರ್ 2021, 10:40 IST
Last Updated 16 ಅಕ್ಟೋಬರ್ 2021, 10:40 IST
ಇಂಗ್ಲೆಂಡ್‌ ಲೀ–ಆನ್–ಸೀನಲ್ಲಿನ ಚರ್ಚ್‌ನಲ್ಲಿ ಶುಕ್ರವಾರ ಹತ್ಯೆಯಾದ ಬ್ರಿಟನ್‌ ಸಂಸತ್ತಿನ ಹಿರಿಯ ಸಂಸದ ಡೇವಿಡ್ ಅಮೆಸ್‌ ಅವರಿಗೆ ಹಿತೈಶಿಗಳು ಶನಿವಾರ ಪುಷ್ಪನಮನ ಸಲ್ಲಿಸಿದರು.
ಇಂಗ್ಲೆಂಡ್‌ ಲೀ–ಆನ್–ಸೀನಲ್ಲಿನ ಚರ್ಚ್‌ನಲ್ಲಿ ಶುಕ್ರವಾರ ಹತ್ಯೆಯಾದ ಬ್ರಿಟನ್‌ ಸಂಸತ್ತಿನ ಹಿರಿಯ ಸಂಸದ ಡೇವಿಡ್ ಅಮೆಸ್‌ ಅವರಿಗೆ ಹಿತೈಶಿಗಳು ಶನಿವಾರ ಪುಷ್ಪನಮನ ಸಲ್ಲಿಸಿದರು.   

ಲೀ–ಆನ್‌–ಸಿ (ಇಂಗ್ಲೆಂಡ್‌): ಬ್ರಿಟನ್‌ನ ಹಿರಿಯ ಸಂಸದ ಡೇವಿಡ್ ಅಮೆಸ್ಸ್ ಅವರ ಹತ್ಯೆ ಒಂದು ಭಯೋತ್ಪಾದಕ ಕೃತ್ಯ ಎಂದು ಹೇಳಿರುವ ಪೊಲೀಸರು, ‘ದಾಳಿಕೋರ ಒಬ್ಬನೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ’ ಎಂದು ಶಂಕಿಸಿದ್ದಾರೆ.

‘ಕನ್ಸರ್ವೇಟಿವ್ ಪಕ್ಷದ ಸಂಸದ ಡೇವಿಡ್ ಅಮೆಸ್ಸ್‌ ಅವರ ಹತ್ಯೆ ಕುರಿತು ತನಿಖೆ ಆರಂಭವಾಗಿದೆ. ಇಸ್ಲಾಮಿಕ್ ಉಗ್ರವಾದದ ಪ್ರಚೋದನೆಗೂ ಈ ಕೃತ್ಯಕ್ಕೂ ಬಲವಾದ ಸಂಬಂಧ ಇರುವ ಅಂಶ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಮೆಟ್ರೊಪಾಲಿಟನ್ ಪೊಲೀಸ್ ಶನಿವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬ್ರಿಟನ್‌ನ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್ ಪಕ್ಷದ ಸಂಸದ ಡೇವಿಡ್ ಅಮೆಸ್ಸ್ ಅವರನ್ನು ಶುಕ್ರವಾರ ಅಪರಿಚಿತನೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಇಲ್ಲಿನ ಬೆಲ್ಫೇರ್ಸ್ ಮೆಥೋಡಿಸ್ಟ್ ಚರ್ಚ್‌ನಲ್ಲಿ ತಮ್ಮ ಕ್ಷೇತ್ರದ ಮತದಾರರೊಂದಿಗೆ ಸಭೆ ನಡೆಸುತ್ತಿದ್ದಾಗ, ಸಭೆಯಲ್ಲಿ ಪಾಲ್ಗೊಂಡಿದ್ದ ಅಪರಿಚಿತನೊಬ್ಬ ಡೇವಿಡ್ ಮೇಲೆ ದಾಳಿ ನಡೆಸಿ ಚಾಕುವಿನಿಂದ ಹಲವು ಬಾರಿ ಇರಿದು ಹತ್ಯೆ ಮಾಡಿದ್ದ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಡೇವಿಡ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವಿಗೀಡಾದರು. ಘಟನೆ ಸಂಬಂಧ ವರ್ಷದ ಯುವಕನನ್ನು ಬಂಧಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.