ADVERTISEMENT

ಬಲೂಚಿಸ್ತಾನ: ಜಾಫರ್ ಎಕ್ಸ್‌ಪ್ರೆಸ್‌ ಮೇಲೆ ದಾಳಿ

ಪಿಟಿಐ
Published 24 ಸೆಪ್ಟೆಂಬರ್ 2025, 16:21 IST
Last Updated 24 ಸೆಪ್ಟೆಂಬರ್ 2025, 16:21 IST
   

ಇಸ್ಲಾಮಾಬಾದ್‌: ಪಾಕಿಸ್ತಾನದ ಬಲೂಚಿಸ್ತಾನ್‌ ಪ್ರಾಂತ್ಯದಲ್ಲಿ ಜಾಫರ್‌ ಎಕ್ಸ್‌ಪ‍್ರೆಸ್‌ ರೈಲಿನ ಮೇಲೆ ಬಾಂಬ್‌ ದಾಳಿ ನಡೆದಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮಸ್ತುಂಗ್‌ನ ಸ್ಪಿಂಜೆಂಡ್‌ ಪ್ರದೇಶದಲ್ಲಿ ರೈಲಿನ ಮೇಲೆ ಮಂಗಳವಾರ ದಾಳಿ ನಡೆದಿದ್ದು, ಪ್ರಸಕ್ತ ವರ್ಷದ ಮಾರ್ಚ್‌ನಿಂದಲೂ ಈ ರೈಲನ್ನು ಗುರಿಯಾಗಿಸಿಕೊಂಡು ಸರಣಿ ದಾಳಿ ನಡೆಸಲಾಗುತ್ತಿದೆ.

ಪೆಶಾವರದಿಂದ ಬರುತ್ತಿದ್ದ ರೈಲಿನ ಮೇಲೆ ಸಂಜೆ ಬಾಂಬ್‌ ದಾಳಿ ನಡೆದಿದ್ದರಿಂದ ಆರು ಬೋಗಿಗಳು ಹಳಿ ತಪ್ಪಿದವು. ಒಂದು ಉರುಳಿ ಬಿದ್ದಿತು. ಬೋಗಿಯಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

10 ಗಂಟೆಗಳ ಅವಧಿಯಲ್ಲಿ ಇದೇ ಪ್ರದೇಶದಲ್ಲಿ ನಡೆದ ಎರಡನೇ ಬಾಂಬ್‌ ಸ್ಫೋಟ ಇದಾಗಿದೆ. ಬಲೂಚಿಸ್ತಾನವನ್ನು ದೇಶದ ಉಳಿದ ಭಾಗಗಳಿಗೆ ಸಂಪರ್ಕಿಸುವ ರೈಲು ಹಳಿಗಳ ಬಳಿಯೇ ಬೆಳಿಗ್ಗೆ ಸ್ಫೋಟ ಸಂಭವಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.