ADVERTISEMENT

ಗುಂಡಿನ ದಾಳಿ: ಕಿವಿಗೆ ಬ್ಯಾಂಡೇಜ್ ಸುತ್ತಿಕೊಂಡು ಬಂದ ಟ್ರಂಪ್‌ಗೆ ಸಂಭ್ರಮದ ಸ್ವಾಗತ

ಪಿಟಿಐ
Published 16 ಜುಲೈ 2024, 13:21 IST
Last Updated 16 ಜುಲೈ 2024, 13:21 IST
<div class="paragraphs"><p>ಗುಂಡಿನ ದಾಳಿಕ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಟ್ರಂಪ್‌ ಅವರನ್ನು ಬೆಂಬಲಿಗರು ಸ್ವಾಗತಿಸಿದರು</p></div>

ಗುಂಡಿನ ದಾಳಿಕ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಟ್ರಂಪ್‌ ಅವರನ್ನು ಬೆಂಬಲಿಗರು ಸ್ವಾಗತಿಸಿದರು

   

ರಾಯಿಟರ್ಸ್‌ ಚಿತ್ರ

ವಾಷಿಂಗ್ಟನ್‌: ಗುಂಡಿನ ದಾಳಿ ನಡೆದ ಬಳಿಕ ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರು ಗಾಯಗೊಂಡ ಬಲಭಾಗದ ಕಿವಿಯ ಭಾಗಶಃ ಭಾಗಕ್ಕೆ ಬಿಳಿಯ ಬಣ್ಣದ ಬ್ಯಾಂಡೇಜ್‌ ಸುತ್ತಿಕೊಂಡು ಸಾರ್ವಜನಿಕವಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು.

ADVERTISEMENT

ಮಿಲ್ವಾಕಿ ನಗರದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ರಿಪಬ್ಲಿಕನ್‌ ನ್ಯಾಷನಲ್‌ ಸಮಾವೇಶದ ಮೊದಲ ದಿನವಾದ ಸೋಮವಾರ ಟ್ರಂಪ್‌ ಕಾಣಿಸಿಕೊಂಡರು. ಟ್ರಂಪ್ ಸಮಾವೇಶದ ಹಾಲ್‌ಗೆ ಆಗಮಿಸುತ್ತಿದ್ದಂತೆ ಸಾವಿರಾರು ಜನರು ಚಪ್ಪಾಳೆ ತಟ್ಟಿ ಸಂಭ್ರಮದಿಂದ ಸ್ವಾಗತಿಸಿದರು.

ನೆರೆದಿದ್ದ ಜನರ ನಡುವೆ ಸಾಗಿದ ಟ್ರಂಪ್‌ ‘ಫೈಟ್, ಫೈಟ್‌, ಫೈಟ್‌’ ಎಂದು ಕೂಗಿದರು. ಬಳಿಕ ಸ್ಥಳದಲ್ಲಿ ಹಾಜರಿದ್ದ ಪ್ರಮುಖ ರಾಜಕೀಯ ನಾಯಕರು ಮತ್ತು ತಮ್ಮ ಮೂವರು ಮಕ್ಕಳು ಸೇರಿ ಕುಟುಂಬ ಸದಸ್ಯರನ್ನು ಮಾತನಾಡಿಸಿದರು.

ಇದೇ ವೇಳೆ ಗಾಯಕ ಲೀ ಗ್ರೀನ್‌ವುಡ್‌ ಅವರು ’ ಗಾಡ್‌ ಬ್ಲೆಸ್‌ ದಿ ಯುಎಸ್‌ಎ’ ಹಾಡನ್ನು ಹಾಡಿದ್ದು, ಟ್ರಂಪ್‌ ಬೆಂಬಲಿಗರು ಎದ್ದು ನಿಂತು ತಾವೂ ಹಾಡು ಹಾಡುವ ಮೂಲಕ ಟ್ರಂಪ್‌ ಗುಣಮುಖವಾಗಿ ಬಂದ ಬಗೆಯನ್ನು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.