
ಢಾಕಾ: ಢಾಕಾದ ಮಾಜಿ ಪೊಲೀಸ್ ಕಮಿಷನರ್ ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಬಾಂಗ್ಲಾದೇಶದ ವಿಶೇಷ ನ್ಯಾಯಮಂಡಳಿಯು ಸೋಮವಾರ ಮರಣ ದಂಡನೆ ವಿಧಿಸಿದೆ.
ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತದಲ್ಲಿ (2024) ನಡೆದ ಗಲಭೆ, ಹಿಂಸಾಚಾರದಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿಸಿದೆ.
ಢಾಕಾ ಮೆಟ್ರೊಪೊಲಿಟನ್ ಪೊಲೀಸ್‌ನ (ಡಿಎಂಪಿ) ಮಾಜಿ ಆಯುಕ್ತ ಹಬೀಬುರ್ ರೆಹಮಾನ್, ಮಾಜಿ ಜಂಟಿ ಆಯುಕ್ತ ಸುದೀಪ್ ಕುಮಾರ್ ಚಕ್ರವರ್ತಿ, ಹೆಚ್ಚುವರಿ ಉಪ ಆಯುಕ್ತ ಮೊಹಮ್ಮದ್ ಅಖ್ತರುಲ್ ಇಸ್ಲಾಂ ಗಲ್ಲುಶಿಕ್ಷೆಗೆ ಗುರಿಯಾದವರು.
ಢಾಕಾದ ಸಹಾಯಕ ಪೊಲೀಸ್ ಕಮಿಷನರ್ ಮೊಹಮ್ಮದ್ ಇಮ್ರುಲ್ ಅವರಿಗೆ ಆರು ವರ್ಷ, ಇನ್‌ಸ್ಪೆಕ್ಟರ್ ಅರ್ಶದ್ ಹುಸೇನ್ ಅವರಿಗೆ ನಾಲ್ಕು ವರ್ಷ, ಮೂವರು ಕಾನ್‌ಸ್ಟೆಬಲ್‌ಗಳಾದ ಸುಜಾನ್ ಹುಸೇನ್, ಇಮಾಜ್ ಹುಸೇನ್ ಮತ್ತು ನಾಸಿರುಲ್ ಇಸ್ಲಾಂ ಅವರಿಗೂ ತಲಾ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಹಾಗೂ ಆಗಿನ ಗೃಹ ಸಚಿವ ಅಸಾದುಝಮಾನ್ ಖಾನ್ ಕಮಲ್ ಅವರಿಗೂ ಇದೇ ನ್ಯಾಯಮಂಡಳಿ ಈ ಹಿಂದೆಯೇ ಮರಣದಂಡನೆ ವಿಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.