ADVERTISEMENT

ಬಾಂಗ್ಲಾದೇಶ: ಎಫ್‌ಆರ್ ಟವರ್‌ನಲ್ಲಿ ಬೆಂಕಿ, 17 ಮಂದಿ ಸಾವು

ಏಜೆನ್ಸೀಸ್
Published 29 ಮಾರ್ಚ್ 2019, 1:42 IST
Last Updated 29 ಮಾರ್ಚ್ 2019, 1:42 IST
   

ಢಾಕಾ: ಇಲ್ಲಿನ ಬನಾನಿ ಪ್ರದೇಶವೊಂದರಲ್ಲಿರುವ 22 ಅಂತಸ್ತಿನ ಎಫ್‌ಆರ್ ಟವರ್‌ನಲ್ಲಿಸಂಭವಿಸಿದ ಬೆಂಕಿ ಅವಘಡದಲ್ಲಿ 17 ಮಂದಿ ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸಾಕಷ್ಟು ಮಂದಿ ಕಟ್ಟಡದೊಳಗೆ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಚರಣೆಯ ಬಳಿಕ ಕೆಲವರನ್ನು ರಕ್ಷಿಸಲಾಗಿದೆ. ಬೆಂಕಿಯ ತೀವ್ರತೆ ಕಡಿಮೆ ಮಾಡಲಾಯಿತು. ಆದರೆ ಸಂಪೂರ್ಣವಾಗಿ ಶಮನ ಮಾಡಲು ಸಾಧ್ಯವಾಗಿಲ್ಲ. ಇದೀಗಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಅಗ್ನಿಶಾಮಕ ಮತ್ತು ನಾಗರಿಕ ರಕ್ಷಣಾ ಉಪನಿರ್ದೇಶಕ ದೆಬಾಶಿಶ್ ಬರ್ದಾನ್ ತಿಳಿಸಿದ್ದಾರೆ.

ಬೆಂಕಿ ಮೊದಲು ಆರನೇ ಅಂತಸ್ತಿನಲ್ಲಿ ಕಾಣಿಸಿಕೊಂಡಿತು. ಬಳಿಕ ಬೆಂಕಿಯ ಕೆನ್ನಾಲಿಗೆ ಎಲ್ಲೆಡೆ ಚಾಚಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದ್ದು,ವಿಷಾನಿಲವನ್ನು ಹೊರಗೆ ಬರುವಂತೆ ಮಾಡಲು ಕಟ್ಟಡದ ಗಾಜನ್ನು ಒಡೆಲಾಯಿತು. ಸ್ಥಳಕ್ಕೆ ಆಗಮಿಸಿದ ಸೇನಾ ಪಡೆ, ಹೆಲಿಕಾಪ್ಟರ್‌ಗಳ ಸಹಾಯದಿಂದ ಕಟ್ಟಡದೊಳಗೆ ಸಿಲುಕಿದ್ದ ಕೆಲವು ಮಂದಿಯನ್ನು ರಕ್ಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.