
ಪಿಟಿಐಬಂಧನ
(ಪ್ರಾತಿನಿಧಿಕ ಚಿತ್ರ)
ಢಾಕಾ: ಹಿಂದೂ ವ್ಯಾಪಾರಿ ಖೋಕನ್ ಚಂದ್ರದಾಸ್ ಅವರನ್ನು ಥಳಿಸಿ, ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೂವರನ್ನು ಭಾನುವಾರ ಬಂಧಿಸಲಾಗಿದೆ. ಮೂರು ದಿನಗಳ ಸಾವು–ಬದುಕಿನ ಹೋರಾಟದ ಬಳಿಕ ಚಂದ್ರದಾಸ್ ಅವರು ಶನಿವಾರ ಮೃತಪಟ್ಟಿದ್ದರು.
ದಾಮುದ್ಯಾರ್ ಸೊಹಾಗ್ ಖಾನ್ (27), ರಬ್ಬಿ ಮೊಲ್ಯಾ (21) ಮತ್ತು ಪಲಾಶ್ ಸರ್ದಾರ್ (25) ಎಂಬುವರನ್ನು ರ್‍ಯಾಪಿಡ್ ಆ್ಯಕ್ಷನ್ ಬೆಟಾಲಿಯನ್ ಬಂಧಿಸಿದೆ. ‘ಸಾಯುವುದಕ್ಕೂ ಮುನ್ನ ಚಂದ್ರದಾಸ್ ಅವರು ಆರೋಪಿಗಳ ಹೆಸರುಗಳನ್ನು ಹೇಳಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.