ADVERTISEMENT

ಬಾಂಗ್ಲಾದ ಬಂದರು ಬಳಸಿಕೊಳ್ಳಿ: ಭಾರತಕ್ಕೆ ಹಸೀನಾ ಸಲಹೆ

ಪಿಟಿಐ
Published 20 ಮಾರ್ಚ್ 2023, 11:21 IST
Last Updated 20 ಮಾರ್ಚ್ 2023, 11:21 IST
ಶೇಕ್‌ ಹಸೀನಾ
ಶೇಕ್‌ ಹಸೀನಾ   

ಢಾಕಾ: ‘ಭಾರತವು ಬಯಸಿದರೆ ದೇಶದ ಚಟ್‌ಗಾಂವ್‌ ಹಾಗೂ ಸಿಲ್‌ಹಟ್‌ ನಗರಗಳಲ್ಲಿ ಇರುವ ಬಂದರುಗಳನ್ನು ಬಳಸಿಕೊಳ್ಳಬಹುದು’ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಕ್‌ ಹಸೀನಾ ಅವರು ಹೇಳಿದ್ದಾರೆ.

‘ಈ ಕ್ರಮವು ದೇಶಗಳ ನಡುವಿನ ಹಾಗೂ ಜನರ ಮಧ್ಯದ ಸಂಪರ್ಕವನ್ನು ಹೆಚ್ಚಿಸುತ್ತದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಈಶಾನ್ಯ ಭಾಗದ ರಾಜ್ಯಗಳಿಗೆ ಚಟ್‌ಗಾಂವ್‌ನಲ್ಲಿರುವ ಬಂದರು ಬಹಳ ಹತ್ತಿರದಲ್ಲಿದೆ.

ಇಂಡಿಯಾ ಫೌಂಡೇಷನ್‌ನ ರಾಮ ಮಾಧವ್‌ ಅವರು ಹಸೀನಾ ಅವರನ್ನು ಭಾನುವಾರ ಅವರ ನಿವಾಸದಲ್ಲಿ ಭೇಟಿಯಾಗಿ ಮಾತನಾಡಿದ್ದಾರೆ. ಈ ಮಾತುಕತೆಯ ವಿವರಗಳನ್ನು ‘ಢಾಕಾ ಟ್ರಿಬ್ಯೂನ್‌’ ಪತ್ರಿಕೆ ವರದಿ ಮಾಡಿದೆ. ಮಾತುಕತೆಯ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಶುಭಾಶಯ ತಿಳಿಸುವಂತೆಯೂ ಮಾಧವ್‌ ಅವರಿಗೆ ಹಸೀನಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.