ADVERTISEMENT

'ಅಹಮದೀಯರು ನಮ್ಮವರಲ್ಲ': ಬಾಂಗ್ಲಾದೇಶದಲ್ಲಿ ಮೂಲಭೂತವಾದಿಗಳಿಂದ ಬೃಹತ್‌ ಪ್ರತಿಭಟನೆ

ಏಜೆನ್ಸೀಸ್
Published 15 ನವೆಂಬರ್ 2025, 23:58 IST
Last Updated 15 ನವೆಂಬರ್ 2025, 23:58 IST
ಇಸ್ಲಾಮಿಕ್‌ ಬಲಪಂಥೀಯ ಸಂಘಟನೆಯು ಢಾಕಾದಲ್ಲಿ ಶನಿವಾರ ಆಯೋಜಿಸಿದ್ದ ರ‍್ಯಾಲಿಯಲ್ಲಿ ಅಹಮದೀಯರನ್ನು ನಾಸ್ತಿಕರು ಎಂದು ಘೋಷಿಸಬೇಕು ಎಂದು ಪ್ರತಿಭಟನೆ ನಡೆಸಿದರು ಎಎಫ್‌ಪಿ ಚಿತ್ರ 
ಇಸ್ಲಾಮಿಕ್‌ ಬಲಪಂಥೀಯ ಸಂಘಟನೆಯು ಢಾಕಾದಲ್ಲಿ ಶನಿವಾರ ಆಯೋಜಿಸಿದ್ದ ರ‍್ಯಾಲಿಯಲ್ಲಿ ಅಹಮದೀಯರನ್ನು ನಾಸ್ತಿಕರು ಎಂದು ಘೋಷಿಸಬೇಕು ಎಂದು ಪ್ರತಿಭಟನೆ ನಡೆಸಿದರು ಎಎಫ್‌ಪಿ ಚಿತ್ರ    

ಢಾಕಾ, ಬಾಂಗ್ಲಾದೇಶ: ಸೂಫಿ ಅನುಯಾಯಿಗಳನ್ನು ನಾಸ್ತಿಕರು ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಶನಿವಾರ ಢಾಕಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದರು. 

19ನೇ ಶತಮಾನದಲ್ಲಿ ಭಾರತದಲ್ಲಿ ಹುಟ್ಟಿಕೊಂಡ ಸೂಫಿ ಪಂಥದ ಅನುಯಾಯಿಗಳಾದ ಅಹಮದೀಯ ಸಮುದಾಯವು ಮುಸಲ್ಮಾನ ಬಾಹುಳ್ಯ ಹೊಂದಿದ್ದ ಬಾಂಗ್ಲಾದೇಶದಲ್ಲಿ ದೀರ್ಘಕಾಲದಿಂದಲೂ ಕಿರುಕುಳ ಅನುಭವಿಸುತ್ತಿದೆ. ಶೇಕ್‌ ಹಸೀನಾ ಅವರನ್ನು ಬಾಂಗ್ಲಾದೇಶದ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದ ಬಳಿಕ ಈ ಸಮುದಾಯಗಳ ಮೇಲೆ ಗುಂಪು ದಾಳಿಗಳು ಹೆಚ್ಚಾಗಿವೆ.

ಢಾಕಾದಲ್ಲಿ ನಡೆದ ಸಮಾವೇಶದಲ್ಲಿ ಭಾರತ, ಪಾಕಿಸ್ತಾನ, ಸೌದಿ ಅರೇಬಿಯಾ, ಈಜಿಪ್ಟ್‌ನ ಧಾರ್ಮಿಕ ಪ್ರವಚನಕಾರರು ಹಾಗೂ ರಾಜಕಾರಣಿಗಳು ಭಾಗವಹಿಸಿದ್ದರು.

ADVERTISEMENT

ಕೆಲವು ಪ್ರತಿಭಟನಕಾರರು ಧರಿಸಿದ್ದ ಟೀ ಶರ್ಟ್‌ಗಳಲ್ಲಿ ‘ಅಹಮದೀಯರನ್ನು ಕಾಫಿರರು ಎಂದು ಘೋಷಿಸಬೇಕು’ ಎಂದು ಬರಹಗಳನ್ನು ಹಾಕಲಾಗಿತ್ತು. ಈ ಪಂಥದ ವಿರುದ್ಧ ಕಾನೂನು ಜಾರಿಗೊಳಿಸಬೇಕು ಎಂದು ಬ್ಯಾನರ್‌ಗಳನ್ನು ಹಾಕಿದ್ದರು.

ಕಟ್ಟರ್ ಇಸ್ಲಾಮಿಕ್‌ ಧರ್ಮಪ್ರಚಾರಕರು ‘ಅಹಮದೀಯ’ರನ್ನು ಧರ್ಮನಿಂದಕರು ಎಂದೇ ಭಾವಿಸುತ್ತಾರೆ. 

‘ಅಹಮದೀಯರು ನಮಗಿಂತಲೂ ಸಂಪೂರ್ಣವಾಗಿ ಭಿನ್ನತೆ ಹೊಂದಿದ್ದಾರೆ. ಎಂದಿಗೂ ಅವರು ನಮ್ಮವರಲ್ಲ. ಬೇರೆ ಧರ್ಮೀಯರಂತೆ ನಮ್ಮ ದೇಶದಲ್ಲಿ ಬದುಕುತ್ತಿದ್ದಾರೆ. ಅವರೂ ಎಂದಿಗೂ ಮುಸಲ್ಮಾನರಲ್ಲ’ ಎಂದು ಪ್ರತಿಭಟನಕಾರ ಮೊಹಮ್ಮದ್‌ ಮಮುನ್ ಶೇಕ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.