ADVERTISEMENT

ಬಾರ್ಬಡೋಸ್ ಅಧ್ಯಕ್ಷೆಯಾಗಿ ಸಾಂಡ್ರಾ ಮೇಸನ್: ಬ್ರಿಟನ್ ವಸಾಹತುಶಾಹಿಯಿಂದ ಹೊರಕ್ಕೆ

ಪಿಟಿಐ
Published 22 ಅಕ್ಟೋಬರ್ 2021, 3:22 IST
Last Updated 22 ಅಕ್ಟೋಬರ್ 2021, 3:22 IST
ಬ್ರಿಟನ್ ರಾಣಿ ಎಲಿಜಬೆತ್(ಎಡ), ಬಾರ್ಬಡೋಸ್‌ನ ನೂತನ ಅಧ್ಯಕ್ಷೆ ಸಾಂಡ್ರಾ ಮೇಸನ್(ಬಲ): ಎಎಫ್‌ಪಿ ಚಿತ್ರ
ಬ್ರಿಟನ್ ರಾಣಿ ಎಲಿಜಬೆತ್(ಎಡ), ಬಾರ್ಬಡೋಸ್‌ನ ನೂತನ ಅಧ್ಯಕ್ಷೆ ಸಾಂಡ್ರಾ ಮೇಸನ್(ಬಲ): ಎಎಫ್‌ಪಿ ಚಿತ್ರ   

ಬ್ರಿಡ್ಜ್‌ಟೌನ್:ಬಾರ್ಬಡೋಸ್ ಕೆರಿಬಿಯನ್ ದ್ವೀಪವು ವಸಾಹತುಶಾಹಿ ಹಿಡಿತವನ್ನು ತೊಡೆದುಹಾಕುವ ನಿರ್ಣಾಯಕ ಹೆಜ್ಜೆಯಲ್ಲಿ ತನ್ನ ಮೊದಲ ಅಧ್ಯಕ್ಷರನ್ನು ಆಯ್ಕೆ ಮಾಡಿದೆ.

ಬ್ರಿಟನ್ ರಾಣಿ ಎಲಿಜಬೆತ್ ಅವರ ಹಿಡಿತದಿಂದ ಹೊರಬರಲು ಸಾಂಡ್ರಾ ಮೇಸನ್ ಅವರನ್ನು ಬುಧವಾರ ತಡರಾತ್ರಿ ದೇಶದ ಅಧ್ಯಕ್ಷರನ್ನಾಗಿ ಹೌಸ್ ಆಫ್ ಅಸೆಂಬ್ಲಿ ಮತ್ತು ಸೆನೆಟ್‌ನ ಜಂಟಿ ಅಧಿವೇಶನದಲ್ಲಿ ಮೂರನೇ ಎರಡರಷ್ಟು ಬಹುಮತದಿಂದ ಆಯ್ಕೆ ಮಾಡಲಾಯಿತು. ಇದು ನಮ್ಮ ‘ಗಣರಾಜ್ಯದ ಹಾದಿಯಲ್ಲಿ ಒಂದು ಮೈಲಿಗಲ್ಲು’ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

1966ರಲ್ಲಿ ಬ್ರಿಟಷರಿಂದ ಸ್ವಾತಂತ್ರ್ಯ ಪಡೆದ ಬಾರ್ಬಡೋಸ್, ವಸಾಹತು ರಾಷ್ಟ್ರವಾಗಿ ಬ್ರಿಟಿಷ್ ರಾಜಪ್ರಭುತ್ವದ ಜೊತೆ ದೀರ್ಘಕಾಲದಿಂದ ಸಂಬಂಧವನ್ನು ಉಳಿಸಿಕೊಂಡಿತ್ತು. ಆದರೆ, ಸಂಪೂರ್ಣ ಸಾರ್ವಭೌಮತ್ವ ಮತ್ತು ಸ್ವದೇಶಿ ನಾಯಕತ್ವಕ್ಕಾಗಿ ಇತ್ತೀಚಿನ ವರ್ಷಗಳಲ್ಲಿ ಕೂಗು ಹೆಚ್ಚಾಗಿದ್ದವು.

ADVERTISEMENT

72 ವರ್ಷದ ಮೇಸನ್ ಅವರು, ಬ್ರಿಟನ್‌ನಿಂದ ದೇಶ ಸ್ವಾತಂತ್ರ್ಯ ಪಡೆದ 55ನೇ ಸ್ವಾತಂತ್ರ್ಯೋತ್ಸವದ ದಿನವಾದ ನವೆಂಬರ್ 30ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. 2018 ರಿಂದ ದ್ವೀಪದ ಗವರ್ನರ್-ಜನರಲ್ ಆಗಿರುವ ಮಾಜಿ ನ್ಯಾಯಶಾಸ್ತ್ರಜ್ಞೆ ಮೇಸನ್, ಬಾರ್ಬಡೋಸ್ ಕೋರ್ಟ್ ಆಫ್ ಅಪೀಲ್ಸ್‌ನಲ್ಲಿ ಸೇವೆ ಸಲ್ಲಿಸಿದ ಮೊದಲ ಮಹಿಳೆಯೂ ಕೂಡ ಆಗಿದ್ದಾರೆ.

ಅಧ್ಯಕ್ಷರ ಆಯ್ಕೆಯು ದೇಶದ ಪಯಣದಲ್ಲಿ ‘ಒಂದು ಪ್ರಮುಖ ಕ್ಷಣ’ಎಂದು ಬಾರ್ಬಡೋಸ್ ಪ್ರಧಾನಿ ಮಿಯಾ ಮೊಟ್ಲೆ ಬಣ್ಣಿಸಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.