ADVERTISEMENT

ಬಿಬಿಸಿಯಿಂದ ಮಾಹಿತಿ ಯುದ್ಧ: ರಷ್ಯಾ ಆರೋಪ

ಪಿಟಿಐ
Published 30 ಜನವರಿ 2023, 15:58 IST
Last Updated 30 ಜನವರಿ 2023, 15:58 IST
ಮಾರಿಯಾ ಜಖರೋವಾ
ಮಾರಿಯಾ ಜಖರೋವಾ   

ಮಾಸ್ಕೊ: ಬಿಬಿಸಿಯು ರಷ್ಯಾದ ವಿರುದ್ಧವಷ್ಟೇ ಅಲ್ಲದೆ ಸ್ವತಂತ್ರ ನೀತಿಗಳನ್ನು ಹೊಂದಿರುವ ಜಾಗತಿಕ ಶಕ್ತಿ ಕೇಂದ್ರಗಳ ವಿರುದ್ಧವೂ ‘ಮಾಹಿತಿ ಯುದ್ಧ’ ನಡೆಸುತ್ತಿದೆ ಎಂದು ರಷ್ಯಾ ಆರೋಪಿಸಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿವಾದಾತ್ಮಕ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಕೆಲ ದಿನಗಳ ಬಳಿಕ ರಷ್ಯಾ ಈ ಪ್ರತಿಕ್ರಿಯೆ ನೀಡಿದೆ.

‘ನಮ್ಮ ಮಿತ್ರ ದೇಶವಾದ ಭಾರತದ ಸ್ನೇಹಿತರು ಈ ಕುರಿತು ಈಗಾಗಲೇ ಪ್ರತಿಕ್ರಿಯಿಸಿದ್ದಾರೆ. ಬಿಬಿಸಿಯು ರಷ್ಯಾದ ವಿರುದ್ಧವಷ್ಟೇ ಅಲ್ಲದೆ ಸ್ವತಂತ್ರ ನೀತಿಗಳನ್ನು ಹೊಂದಿರುವ ಜಾಗತಿಕ ಶಕ್ತಿ ಕೇಂದ್ರಗಳ ವಿರುದ್ಧವೂ ‘ಮಾಹಿತಿ ಯುದ್ಧ’ ನಡೆಸುತ್ತಿದೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ’ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ.

ADVERTISEMENT

‘ಬಿಬಿಸಿ ಸ್ವತಂತ್ರವಾಗಿ ಉಳಿದಿಲ್ಲ. ಅದೂ ಅವಲಂಬಿತವಾಗಿದೆ. ಪತ್ರಿಕೋದ್ಯಮ ವೃತ್ತಿಯ ಮೂಲಭೂತ ಅವಶ್ಯಕತೆಗಳನ್ನು ಅದು ನಿರ್ಲಕ್ಷಿಸುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.