ADVERTISEMENT

ಫೋನ್‍ನಲ್ಲಿ ಬರೆದು, ವಾಟ್ಸ್ಆ್ಯಪ್‍ನಲ್ಲಿ ಕಳುಹಿಸಿದ ಕೃತಿಗೆ ಸಾಹಿತ್ಯ ಪುರಸ್ಕಾರ

ರಾಯಿಟರ್ಸ್
Published 4 ಫೆಬ್ರುವರಿ 2019, 14:11 IST
Last Updated 4 ಫೆಬ್ರುವರಿ 2019, 14:11 IST
ಬೆಹರೊಜ್ ಬೂಚಾನಿ (ಕೃಪೆ: ಫೇಸ್‍ಬುಕ್)
ಬೆಹರೊಜ್ ಬೂಚಾನಿ (ಕೃಪೆ: ಫೇಸ್‍ಬುಕ್)   

ಸಿಡ್ನಿ:ಬಂಧೀಖಾನೆಯೊಂದರಲ್ಲಿರುವ ಇರಾನ್ ಮೂಲದ ನಿರಾಶ್ರಿತ ಬೆಹರೊಜ್ ಬೂಚಾನಿ ಮೊಬೈಲ್ ಫೋನ್‍ನಲ್ಲಿ ಬರೆದು ವಾಟ್ಸ್ಆ್ಯಪ್‍ನಲ್ಲಿ ಕಳುಹಿಸಿದ ಕೃತಿಗೆ ಆಸ್ಟ್ರೇಲಿಯಾದ ಅತ್ಯುನ್ನತಸಾಹಿತ್ಯ ಪ್ರಶಸ್ತಿ ಲಭಿಸಿದೆ.

ಪಪುವಾ ನ್ಯೂ ಗಿನಿ ದ್ವೀಪದಲ್ಲಿರುವ ಬೂಚಾನಿ ನೋ ಫ್ರೆಂಡ್ಸ್ ಬಟ್ ದ ಮೌಂಟೇನ್ಸ್ ಎಂಬ ಪುಸ್ತಕ ಬರೆದಿದ್ದು, ಇದು ಅವರ ಚೊಚ್ಚಲ ಕೃತಿ ಆಗಿದೆ.ಈ ಕೃತಿಗೆ ವಿಕ್ಟೋರಿಯನ್ ಸಾಹಿತ್ಯ ಪುರಸ್ಕಾರ ಲಭಿಸಿದ್ದು, ಪ್ರಶಸ್ತಿ ಮೊತ್ತ 73,390 ಡಾಲರ್ (ಸರಿಸುಮಾರು 52 ಲಕ್ಷ ರೂಪಾಯಿ).

ಆರು ವರ್ಷಗಳ ಹಿಂದೆ ಆಸ್ಟ್ರೇಲಿಯಾಗೆ ಹೋಗುತ್ತಿದ್ದ ನಿರಾಶ್ರಿತರ ದೋಣಿಯನ್ನು ಮಾನುಸ್ ದ್ವೀಪದಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಆ ದೋಣಿಯಲ್ಲಿದ್ದ ಬೂಚಾನಿ ಬಂಧಿಯಾಗಿದ್ದರು.

ADVERTISEMENT

ಸಾಹಿತ್ಯ ಪುರಸ್ಕಾರ ಲಭಿಸಿದ ಸುದ್ದಿ ಬಗ್ಗೆ ಸಂದೇಶದ ಮೂಲಕವೇ ಪ್ರತಿಕ್ರಿಯಿಸಿದ ಬೂಚಾನಿ, ನನ್ನ ಸುತ್ತಲೂ ಮುಗ್ದ ಜನರು ಸಂಕಟ ಪಡುವುದನ್ನು ನೋಡುತ್ತಿದ್ದೇನೆ, ನನ್ನ ಈ ಸಾಧನೆ ಬಗ್ಗೆ ನನಗೆ ಸಂಭ್ರಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಫಾರ್ಸಿ ಭಾಷೆಯಲ್ಲಿ ಬರೆದ ಪಠ್ಯವನ್ನು ಆಸ್ಟ್ರೇಲಿಯಾದಲ್ಲಿರುವ ಅನುವಾದಕರೊಬ್ಬರಿಗೆ ವಾಟ್ಸ್ಆ್ಯಪ್ ಮೂಲಕ ಕಳಿಸಿಕೊಡುತ್ತಿದ್ದರು.

ನಾನು ಪುಸ್ತಕ ಬರೆಯುತ್ತಿದ್ದಾಗ ಎಲ್ಲಿಯಾದರೂ ಫೋನ್ ಕ್ಯಾಂಪ್ ಗಾರ್ಡ್ ಗಳ ಕೈಗೆ ಸಿಕ್ಕಿ ಅವರು ಅದನ್ನು ಕಸಿದುಕೊಂಡರೆ ಏನು ಮಾಡುವುದು ಎಂಬ ಭಯ ನನಗೆ ಕಾಡುತ್ತಿತ್ತು ಎಂದ ಬೂಚಾನಿ,ತನ್ನನ್ನು ಬಂಧಿಯಾಗಿರಿಸಿರುವ ದೇಶ ನೀಡುವ ಪುರಸ್ಕಾರ ತಮ್ಮನ್ನು ಅರಸಿಕೊಂಡು ಬಂದಿರುವುದ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.