ADVERTISEMENT

ಬೀಜಿಂಗ್‌ನ 11 ವಸತಿ ಪ್ರದೇಶ ಲಾಕ್‌ಡೌನ್‌

ಚೀನಾದಲ್ಲಿ ಮತ್ತೆ ಕೊರೊನಾ ವೈರಸ್ ಸೋಂಕು ಪತ್ತೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 19:31 IST
Last Updated 13 ಜೂನ್ 2020, 19:31 IST
ಬೀಜಿಂಗ್‌ನಲ್ಲಿ ಶನಿವಾರ ಕ್ಸಿನ್‌ಫಾಡಿ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದ್ದು, ಪೊಲೀಸ್ ಕಾವಲು ಹಾಕಲಾಗಿದೆ –ಎಎಫ್‌ಪಿ ಚಿತ್ರ 
ಬೀಜಿಂಗ್‌ನಲ್ಲಿ ಶನಿವಾರ ಕ್ಸಿನ್‌ಫಾಡಿ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದ್ದು, ಪೊಲೀಸ್ ಕಾವಲು ಹಾಕಲಾಗಿದೆ –ಎಎಫ್‌ಪಿ ಚಿತ್ರ    

ಬೀಜಿಂಗ್‌ (ಪಿಟಿಐ):ವಿದೇಶದಿಂದ ಬಂದವರಲ್ಲದೇ, ದೇಶದೊಳಗೇ ಪ್ರಸರಣಗೊಂಡಿರುವಆರು ಹೊಸ ಕೋವಿಡ್‌–19 ಪ್ರಕರಣಗಳು ಪತ್ತೆಯಾದ ಕಾರಣ, ಬೀಜಿಂಗ್‌ನಲ್ಲಿ ಆರು ಪ್ರಮುಖ ಮಾರುಕಟ್ಟೆಗಳು ಮತ್ತು ಮಾರುಕಟ್ಟೆ ಸಮೀಪದ11 ವಸತಿ ಸಮುದಾಯಗಳನ್ನು ಲಾಕ್‌ಡೌನ್ ಮಾಡಲಾಗಿದೆ.

ಬೀಜಿಂಗ್‌ನಲ್ಲಿ ಪತ್ತೆಯಾದ 6 ಪ್ರಕರಣಗಳು ಸೇರಿದಂತೆ ದೇಶದಲ್ಲಿ ಶುಕ್ರವಾರ ಒಟ್ಟು 18 ಹೊಸ ಪ್ರಕರಣ ಗಳು ಪತ್ತೆಯಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಶನಿವಾರ ತಿಳಿಸಿದೆ.

ಶುಕ್ರವಾರ, ಲಕ್ಷಣರಹಿತ 7 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು 98 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಕ್ಸಿನ್‌ಫಾಡಿ ಮಾರುಕಟ್ಟೆಯಲ್ಲಿ ಆಮದು ಮಾಡಿಕೊಳ್ಳಲಾಗುವ ಸಾಲ್ಮನ್ ಮೀನುಗಳನ್ನು ಕತ್ತರಿಸುವ ಚಾಪಿಂಗ್ ಬೋರ್ಡ್‌ನಲ್ಲಿ ಕೊರೊನಾ ವೈರಸ್‌ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿನ9 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ ವರದಿಗಳು ನೆಗೆಟಿವ್‌ ಬಂದಿದೆ. ಎಂದು ಕ್ಸಿನ್‌ಫಾಡಿ ಮಾರುಕಟ್ಟೆಯ ಮುಖ್ಯಸ್ಥ ಜಾಂಗ್ ಯಕ್ಸಿ ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.