ADVERTISEMENT

ಪಾಕಿಸ್ತಾನದಲ್ಲಿ ಪಂಜರದಿಂದ ತಪ್ಪಿಸಿಕೊಂಡ ಬಂಗಾಳ ಹುಲಿ: ಇಬ್ಬರಿಗೆ ಗಾಯ

ಭಾರಿ ಕಾರ್ಯಾಚರಣೆ ಬಳಿಕ ಹುಲಿ ಸೆರೆ

ಪಿಟಿಐ
Published 1 ಏಪ್ರಿಲ್ 2024, 3:13 IST
Last Updated 1 ಏಪ್ರಿಲ್ 2024, 3:13 IST
<div class="paragraphs"><p>ಬಂಗಾಳ ಹುಲಿ</p></div>

ಬಂಗಾಳ ಹುಲಿ

   

ಲಾಹೋರ್: ಬಂಗಾಳ ಹುಲಿಯೊಂದು ಪಂಜರದಿಂದ ತಪ್ಪಿಸಿಕೊಂಡು ಇಬ್ಬರು ವ್ಯಕ್ತಿಗಳನ್ನು ಗಾಯಗೊಳಿಸಿರುವ ಘಟನೆ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಮುಲ್ತಾನ್ ಎಂಬಲ್ಲಿ ಭಾನುವಾರ ನಡೆದಿದೆ.

ಹುಲಿಯನ್ನು ಅದರ ಮಾಲೀಕ ವಾಕಸ್ ಅಹ್ಮದ್ ಎನ್ನುವವರು ಲಾಹೋರ್‌ನಿಂದ ಮುಲ್ತಾನ್‌ನ ಮೃಗಾಲಯಕ್ಕೆ ಸಾಗಿಸುತ್ತಿದ್ದರು. ಮುಲ್ತಾನ್ ಹೊರವಲಯದಲ್ಲಿ ವಾಹನದೊಳಗಿನ ಪಂಜರದಲ್ಲಿದ್ದ ಹುಲಿ ಸರಳುಗಳನ್ನು ಮುರಿದು ಹೊರಗೆ ಬಂದಿತ್ತು.

ADVERTISEMENT

ಈ ವೇಳೆ ಹುಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ‍ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪಂಜಾಬ್ ಪ್ರಾಂತ್ಯದ ವನ್ಯಜೀವಿ ಇಲಾಖೆಯ ನಿರ್ದೇಶಕ ಮುದಾಸರ್ ರಿಯಾಜ್ ಮಲೀಕ್ ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಹುಲಿ ಪಂಜರದಿಂದ ತಪ್ಪಿಸಿಕೊಂಡ ಸುದ್ದಿ ತಿಳಿದು ನಮ್ಮ ತಂಡ ಭಾರಿ ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿದಿದೆ. ಅದನ್ನು ಮುಲ್ತಾನ್‌ನ ಮೃಗಾಲಯಕ್ಕೆ ಬಿಡಲಾಗುವುದು ಎಂದು ತಿಳಿಸಿದ್ದಾರೆ.

ನಮ್ಮ ಇಲಾಖೆಗೆ ಮೊದಲೇ ಮಾಹಿತಿ ನೀಡದೇ ಹುಲಿಯನ್ನು ಸಾಗಿಸುತ್ತಿದ್ದ ಅದರ ಮಾಲೀಕನಿಗೆ ದಂಡ ವಿಧಿಸಲಾಗಿದೆ ಎಂದು ರಿಯಾಜ್ ಮಲೀಕ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.