
ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದರು –ಪಿಟಿಐ ಚಿತ್ರ )
ಜೆರುಸಲೇಂ: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಸ್ನೇಹಿತನಿಗಿಂತ ಹೆಚ್ಚು’ ಎಂದು ಬಣ್ಣಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು 2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಭೀಕರ ದಾಳಿಯ ಬಳಿಕ ಇಸ್ರೇಲ್ ಪರವಾಗಿ ನಿಂತಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.
ಹಮಾಸ್ ನಡೆಸಿದ ಮಾರಕ ದಾಳಿಯನ್ನು ಆರಂಭದಲ್ಲಿಯೇ ಖಂಡಿಸಿದ ವಿಶ್ವದ ನಾಯಕರಲ್ಲಿ ಮೋದಿ ಕೂಡ ಒಬ್ಬರು. ಈ ದಾಳಿಯಲ್ಲಿ 1200 ಇಸ್ರೇಲಿಗಳು ಮೃತಪಟ್ಟಿದ್ದರೆ ಸುಮಾರು 250 ಮಂದಿಯನ್ನು ಅಪಹರಿಸಲಾಗಿತ್ತು.
‘ನನ್ನ ಪ್ರೀತಿಯ ಸ್ನೇಹಿತ ನರೇಂದ್ರ ಅವರ ಭೇಟಿಯಿಂದ ನಾನು ಭಾವುಕನಾಗಿದ್ದೇನೆ. ನೀವು ಇಸ್ರೇಲ್‌ನ ಉತ್ತಮ ಸ್ನೇಹಿತ. ಜಾಗತಿಕ ವೇದಿಕೆಯಲ್ಲಿ ಉತ್ತಮ ನಾಯಕ. ನೀವು ನನಗೆ ಸ್ನೇಹಿತನಿಗಿಂತಲೂ ಹೆಚ್ಚು ಒಬ್ಬ ಸಹೋದರ’ ಎಂದು ನೆತನ್ಯಾಹು ಹೇಳಿದರು. ‘
ಭಾರತ ಒಂದು ದೈತ್ಯ ದೇಶ ಅಗಾಧ ಶಕ್ತಿ ಹೊಂದಿದೆ. ಅದು ತನ್ನ ಶಕ್ತಿಯೊಂದಿಗೆ ಇಸ್ರೇಲ್‌ಗೆ ಬೆಂಬಲ ನೀಡಿದೆ’ ಎಂದರು. ‘ಭಾರತವು ಬಾಹ್ಯಾಕಾಶದ ಸೂಪರ್ ಪವರ್ ದೇಶವಾಗಿದ್ದು ಏಷ್ಯಾದ ಹುಲಿಯಾಗಿದೆ’ ಎಂದು ಅವರು ಶ್ಲಾಘಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.