ADVERTISEMENT

ಅಮೆರಿಕ: ಎರಡು ‍ಪ್ರಮುಖ ಹುದ್ದೆಗಳಿಗೆ ಭಾರತೀಯ ಮೂಲದ ತಜ್ಞರ ನೇಮಕ

ಪಿಟಿಐ
Published 14 ಫೆಬ್ರುವರಿ 2021, 7:08 IST
Last Updated 14 ಫೆಬ್ರುವರಿ 2021, 7:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹ್ಯೂಸ್ಟನ್‌: ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ನೇತೃತ್ವದ ಸರ್ಕಾರವು ಸ್ವಯಂಸೇವೆ ಮತ್ತು ಸೇವೆಯ ಫೆಡರಲ್‌ ಏಜೆನ್ಸಿಯಾದ ಅಮೆರಿಕಾರ್ಪ್ಸ್‌ನ ಎರಡು ‍ಪ್ರಮುಖ ಹುದ್ದೆಗಳಿಗೆ ಭಾರತೀಯ ಮೂಲದ ಸಾರ್ವಜನಿಕ ಸೇವೆಗಳ ತಜ್ಞರನ್ನು ನೇಮಕ ಮಾಡಿದೆ.

ಅಮೆರಿಕಾರ್ಪ್ಸ್‌ ಸ್ಟೇಟ್‌ ಮತ್ತು ನ್ಯಾಷನಲ್‌ನ ನಿರ್ದೇಶಕಿಯಾಗಿ ಸೋನಾಲಿ ನಿಜ್ವಾನ್ ಮತ್ತು ಸಂಸ್ಥೆಯ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥನಾಗಿ ಶ್ರೀ ಪ್ರೆಸ್ಟನ್ ಕುಲಕರ್ಣಿ ಅವರನ್ನು ನೇಮಕ ಮಾಡಿದೆ.

ಕುಲಕರ್ಣಿ ಅವರು ಅಮೆರಿಕದ ಕಾಂಗ್ರೆಸ್‌ಗೆ ಎರಡು ಬಾರಿ ಸ್ಪರ್ಧಿಸಿದ್ದರು. ಆದರೆ ಗೆಲವು ಸಾಧಿಸುವಲ್ಲಿ ವಿಫಲರಾದರು. ಸೋನಾಲಿ ನಿಜ್ವಾನ್ ಅವರು ಅಮೆರಿಕದ ವಿದೇಶಾಂಗ ಸೇವೆಗಳ ಅಧಿಕಾರಿಯಾಗಿ 14 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.

ADVERTISEMENT

‘ಅಮೆರಿಕಾರ್ಪ್ಸ್‌ಗೆ ಡ್ಯಾನ್‌ ಕೊಹ್ಲ್ ಜತೆಗೆಪ್ರೆಸ್ಟನ್ ಕುಲಕರ್ಣಿ ಮತ್ತು ಸೋನಾಲಿ ನಿಜ್ವಾನ್ ಅವರನ್ನು ಆರಿಸಲಾಗಿದೆ. ಈ ಮೂಲಕ ಜೋ ಬೈಡನ್‌ ಸರ್ಕಾರವು ವೈವಿದ್ಯಮಯ ನಾಯಕತ್ವವನ್ನು ಬೆಂಬಲಿಸುತ್ತಿದೆ’ ಎಂದು ಅಮೆರಿಕಾರ್ಪ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

‘ಈ ನಾಯಕರು ಕೋವಿಡ್‌–19,ಆರ್ಥಿಕ ಚೇತರಿಕೆ, ಜನಾಂಗೀಯ ಸಮಾನತೆ ಮತ್ತು ಹವಾಮಾನ ಬದಲಾವಣೆಯಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ಬೈಡನ್‌ ಆಡಳಿತಕ್ಕೆ ಸಹಕರಿಸಲಿದ್ದಾರೆ’ ಎಂದು ಅಮೆರಿಕಾರ್ಪ್ಸ್‌ ಹೇಳಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.