ADVERTISEMENT

ಬೈಡನ್ ವಿಶ್ರಾಂತಿ ಗೃಹದ ವಾಯು ಪ್ರದೇಶಕ್ಕೆ ವಿಮಾನ ಲಗ್ಗೆ; ಅಧ್ಯಕ್ಷರ ಸ್ಥಳಾಂತರ

ಏಜೆನ್ಸೀಸ್
Published 5 ಜೂನ್ 2022, 2:14 IST
Last Updated 5 ಜೂನ್ 2022, 2:14 IST
ಜೋ ಬೈಡನ್
ಜೋ ಬೈಡನ್   

ರೆಹೋಬೋತ್ ಬೀಚ್ (ಅಮೆರಿಕ): ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ವಿಶ್ರಾಂತಿ ಗೃಹದ ನಿರ್ಬಂಧಿತ ವಾಯು ಪ್ರದೇಶಕ್ಕೆ ಲಘು ಖಾಸಗಿ ವಿಮಾನವೊಂದು ಶನಿವಾರ ಲಗ್ಗೆಯಿಟ್ಟ ಘಟನೆ ನಡೆದಿದೆ.

ಇದರಿಂದಾಗಿ ಜೋ ಬೈಡನ್ ಹಾಗೂ ಅವರ ಪತ್ನಿ, ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರನ್ನು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು ಎಂದು ಶ್ವೇತಭವನ ಮತ್ತು ಸೀಕ್ರೆಟ್ ಸರ್ವಿಸ್ ತಿಳಿಸಿದೆ.

ಬೈಡನ್ ಮತ್ತು ಅವರ ಕುಟುಂಬಕ್ಕೆ ಯಾವುದೇ ಬೆದರಿಕೆ ಇಲ್ಲ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಶ್ವೇತಭವನ ತಿಳಿಸಿದೆ.

ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಬೈಡನ್ ಹಾಗೂ ಪತ್ನಿ, ರೆಹೋಬೊತ್ ಬೀಚ್‌ನ ನಿವಾಸಕ್ಕೆ ಮರಳಿದರು.

ಖಾಸಗಿ ವಿಮಾನ ತಪ್ಪಾಗಿ ನಿರ್ಬಂಧಿತ ವಾಯುಪ್ರದೇಶವನ್ನು ಪ್ರವೇಶಿಸಿದೆ. ಬಳಿಕ ಅದನ್ನು ತೆರವುಗೊಳಿಸಲಾಗಿದೆ ಎಂದು ಸೀಕ್ರೆಟ್ ಸರ್ವಿಸ್ ಮಾಹಿತಿ ನೀಡಿದೆ.

ವಾಯು ಮಾರ್ಗ ನಿರ್ದೇಶನವನ್ನು ಸರಿಯಾಗಿ ಪಾಲಿಸದ ಪೈಲಟ್ ಅನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.