ADVERTISEMENT

ಇಸ್ರೇಲ್‌ಗೆ ಬೆಂಬಲಕ್ಕೆ ನಿಂತ ಅಮೆರಿಕ

ನೇತನ್ಯಾಹು ಜೊತೆ ದೂರವಾಣಿ ಮೂಲಕ ಮಾತುಕತೆ: ತನ್ನನ್ನು ರಕ್ಷಿಸಿಕೊಳ್ಳುವ ಇಸ್ರೇಲ್‌ ಎಲ್ಲ ಹಕ್ಕು ಹೊಂದಿದೆ ಎಂದು ಪ್ರತಿಪಾದನೆ

ಪಿಟಿಐ
Published 18 ಮೇ 2021, 5:42 IST
Last Updated 18 ಮೇ 2021, 5:42 IST
ಬೆಂಜಮಿನ್‌ ನೇತನ್ಯಾಹು, ಜೋ ಬೈಡನ್‌
ಬೆಂಜಮಿನ್‌ ನೇತನ್ಯಾಹು, ಜೋ ಬೈಡನ್‌   

ವಾಷಿಂಗ್ಟನ್‌: ‘ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ತನ್ನನ್ನು ರಕ್ಷಿಸಿಕೊಳ್ಳುವ ಎಲ್ಲ ಹಕ್ಕು ಹೊಂದಿರುವ ಇಸ್ರೇಲ್‌ಗೆ ತಮ್ಮ ಬೆಂಬಲ ಇದೆ ಎಂಬುದಾಗಿ ತಿಳಿಸಿದರು’ ಎಂದು ಶ್ವೇತಭವನ ಹೇಳಿದೆ.

‘ಇಸ್ರೇಲ್‌ ಮೇಲೆ ನಡೆಯುತ್ತಿರುವ ರಾಕೆಟ್‌ ದಾಳಿಯನ್ನು ಬೈಡನ್‌ ವಿರೋಧಿಸಿದರು. ಅಲ್ಲದೇ, ನಾಗರಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡುವಂತೆ ತಿಳಿಸಿದರು’ ಎಂದೂ ಶ್ವೇತಭವನದ ಪ್ರಕಟಣೆ ತಿಳಿಸಿದೆ.

ಇಸ್ರೇಲ್‌ನಲ್ಲಿ ಭುಗೆಲೆದ್ದಿರುವ ಕೋಮು ಹಿಂಸಾಚಾರವನ್ನು ತಹಬಂದಿಗೆ ತರುವುದು ಹಾಗೂಜೆರುಸಲೇಮ್‌ನಲ್ಲಿ ಶಾಂತಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ನೇತನ್ಯಾಹು ಸರ್ಕಾರ ಕೈಗೊಂಡ ಕ್ರಮಗಳನ್ನು ಬೈಡನ್‌ ಶ್ಲಾಘಿಸಿದರು ಎಂದೂ ತಿಳಿಸಿದೆ.

ADVERTISEMENT

‘ಕದನವಿರಾಮ ಘೋಷಣೆಗೆ ಅಮೆರಿಕ ಬೆಂಬಲ ನೀಡುತ್ತದೆ. ಈ ನಿಟ್ಟಿನಲ್ಲಿ ಈಜಿಪ್ಟ್‌ನೊಂದಿಗೆ ನಡೆಸಿದ ಮಾತುಕತೆ ಕುರಿತಂತೆಯೂ ಬೈಡನ್‌ ಅವರು ನೇತನ್ಯಾಹುಗೆ ಮಾಹಿತಿ ನೀಡಿದರು’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.