ADVERTISEMENT

ಅಮೆರಿಕ: ಕನೆಕ್ಟಿಕಟ್‌ನ ಫೆಡರಲ್‌ ನ್ಯಾಯಧೀಶರಾಗಿ ಸರಳಾ ನೇಮಕ

ಪಿಟಿಐ
Published 16 ಜೂನ್ 2021, 5:41 IST
Last Updated 16 ಜೂನ್ 2021, 5:41 IST
ಸರಳಾ ವಿದ್ಯಾ ನಗಲಾ           -ಟ್ವಿಟರ್‌ ಚಿತ್ರ
ಸರಳಾ ವಿದ್ಯಾ ನಗಲಾ           -ಟ್ವಿಟರ್‌ ಚಿತ್ರ   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಭಾರತ–ಅಮೆರಿಕನ್‌ ಸರಳಾ ವಿದ್ಯಾ ನಗಲಾ ಅವರನ್ನು ಕನೆಕ್ಟಿಕಟ್‌ನ ಫೆಡರಲ್‌ ನ್ಯಾಯಧೀಶರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ.

ಈ ಬಗ್ಗೆ ಸೆನೆಟ್‌ ದೃಢಪಡಿಸಿದರೆ,‘ ಫೆಡರಲ್ ಪ್ರಾಸಿಕ್ಯೂಟರ್ ಸರಳಾ ವಿದ್ಯಾ ಅವರು ಜಿಲ್ಲಾ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಲಿರುವ ಮೊದಲ ದಕ್ಷಿಣ ಏಷ್ಯಾ ಮೂಲದ ವ್ಯಕ್ತಿಯಾಗಲಿದ್ದಾರೆ.

ಪ್ರಸ್ತುತ, ನಗಲಾ ಅವರು ಕನೆಕ್ಟಿಕಟ್‌ನಲ್ಲಿರುವ ಅಟಾರ್ನಿ ಕಚೇರಿಯಲ್ಲಿ ಅಪರಾಧ ವಿಭಾಗದ ಉಪ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2012ರಲ್ಲಿ ಸರಳಾ ಅವರು ಅಮೆರಿಕದ ಅಟಾರ್ನಿ ಕಚೇರಿಗೆ ಸೇರ್ಪಡೆಯಾದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.