ADVERTISEMENT

ಷಿ ಜಿನ್‌ಪಿಂಗ್ ಸರ್ವಾಧಿಕಾರಿ: ಜೋ ಬೈಡನ್

ಪಿಟಿಐ
Published 16 ನವೆಂಬರ್ 2023, 13:33 IST
Last Updated 16 ನವೆಂಬರ್ 2023, 13:33 IST
ಜೋ ಬೈಡನ್
ಜೋ ಬೈಡನ್   

ಕ್ಯಾಲಿಫೋರ್ನಿಯಾ: ‘ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಒಬ್ಬ ಸರ್ವಾಧಿಕಾರಿ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಟೀಕಿಸಿದ್ದಾರೆ. 

ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ನಡೆದ ಏಷ್ಯಾ–ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯ ಭಾಗವಾಗಿ ಬೈಡನ್ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಭೇಟಿಯಾಗಿ, ಉಭಯ ದೇಶಗಳ ಬಾಂಧವ್ಯ ವೃದ್ಧಿ ನಿಟ್ಟಿನಲ್ಲಿ ಚರ್ಚೆ ನಡೆಸಿದರು.  ಈ ಭೇಟಿ ಬಳಿಕ ಬೈಡನ್‌ ಅವರು, ಚೀನಾ ಅಧ್ಯಕ್ಷರ ವಿರುದ್ಧ  ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಬೈಡನ್‌, ‘‌ಅವರು (ಷಿ ಅವರನ್ನು ಉದ್ದೇಶಿಸಿ) ಈಗಲೂ ಸರ್ವಾಧಿಕಾರಿಯಂತೆ ಕಾಣುತ್ತಾರೆ. ಕಮ್ಯುನಿಸ್ಟ್ ದೇಶವಾಗಿರುವ ಚೀನಾದ ಆಡಳಿತವು ನಮ್ಮ ಆಡಳಿತಕ್ಕಿಂತಲೂ ತೀರಾ ಭಿನ್ನವಾಗಿದೆ. ಆದರೂ, ನಮ್ಮ ಮಾತುಕತೆ ಪ್ರಗತಿ ಕಂಡಿದೆ’ ಎಂದು ಹೇಳಿದರು. 

ADVERTISEMENT

ಸೇನಾ ಸಂವಹನಕ್ಕೆ ಸಮ್ಮತಿ: ಉಭಯ ನಾಯಕರು ಎರಡೂ ದೇಶಗಳ ನಡುವೆ ಸಂಬಂಧವನ್ನು ವೃದ್ಧಿಸುವ ನಿಟ್ಟಿನಲ್ಲಿ ನಾಲ್ಕು ಗಂಟೆಗಳ ಕಾಲ ಚರ್ಚೆ ನಡೆಸಿದರು.

ಈ ವೇಳೆ ಬೈಡನ್ ಮತ್ತು ಷಿ ಜಿನ್‌ಪಿಂಗ್ ಉನ್ನತ ಮಟ್ಟದ ಸೇನಾ ಸಂವಹನಕ್ಕೆ ಸಮ್ಮತಿ ಸೂಚಿಸಿದ್ದರು. ಜೊತೆಗೆ ಮಾದಕ ದ್ರವ್ಯದ ವಿರುದ್ಧದ ಹೋರಾಟ ಮತ್ತು ಕೃತಕ ಬುದ್ಧಿಮತ್ತೆಯ ಕುರಿತಾಗಿ  ಮಾತುಕತೆ ನಡೆಸಿದ್ದರು. 

‘ದ್ವಿಪಕ್ಷೀಯ ಸಂಬಂಧದಲ್ಲಿ ಅಮೆರಿಕ ಮತ್ತು ಚೀನಾ ಮುಖ್ಯವಾದ ಮುನ್ನಡೆ ಸಾಧಿಸಿವೆ’ ಎಂದು ಬೈಡನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.