ADVERTISEMENT

ಅಫ್ಗಾನಿಸ್ತಾನಕ್ಕೆ ಅಮೆರಿಕ ಸೇನೆ ಬೆಂಬಲ ಮುಂದುವರಿಯಲಿದೆ: ಬೈಡನ್‌

ಏಜೆನ್ಸೀಸ್
Published 8 ಏಪ್ರಿಲ್ 2021, 5:47 IST
Last Updated 8 ಏಪ್ರಿಲ್ 2021, 5:47 IST
ಜೋ ಬೈಡನ್
ಜೋ ಬೈಡನ್   

ವಾಷಿಂಗ್ಟನ್: ‘ನಿಗದಿಪಡಿಸಿದಂತೆ ಮೇ 1ರೊಳಗೆ ಅಫ್ಗಾನಿಸ್ತಾನದಿಂದ ದೇಶದ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ತಾಲಿಬಾನ್‌ ದಾಳಿ ಮಾಡುವುದನ್ನು ನಿಲ್ಲಿಸದೇ ಇರುವುದರಿಂದ ಅಫ್ಗಾನಿಸ್ತಾನಕ್ಕೆ ನೀಡುತ್ತಿರುವ ಮಿಲಿಟರಿ ಬೆಂಬಲವನ್ನು ಮುಂದುವರಿಸುವುದಾಗಿಯೂ ಅವರು ತಿಳಿಸಿದ್ದಾರೆ.

‘ಸೇನೆಯನ್ನು ಕ್ರಮಬದ್ಧವಾಗಿ ಹಿಂದಕ್ಕೆ ಕರೆಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ADVERTISEMENT

‘ಇನ್ನು ಮೂರು ವಾರಗಳಲ್ಲಿ ಅಫ್ಗಾನಿಸ್ತಾನನಲ್ಲಿರುವ ಎಲ್ಲಾ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದು ಅಸಾಧ್ಯ’ ಎಂದು ಮಾರ್ಚ್ ಅಂತ್ಯದಲ್ಲಿ ಬೈಡನ್ ಅಭಿಪ್ರಾಯಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.