ADVERTISEMENT

ಅಮೆರಿಕಕ್ಕೆ ಜಪಾನ್ ಪ್ರಧಾನಿ; ಶ್ವೇತಭವನದಲ್ಲಿ ಬೈಡನ್ ಜೊತೆ ಚರ್ಚೆ

ಏಜೆನ್ಸೀಸ್
Published 4 ಜನವರಿ 2023, 4:14 IST
Last Updated 4 ಜನವರಿ 2023, 4:14 IST
ಫುಮಿಯೊ ಕಿಶಿದಾ ಹಾಗೂ ಜೋ ಬೈಡನ್
ಫುಮಿಯೊ ಕಿಶಿದಾ ಹಾಗೂ ಜೋ ಬೈಡನ್   

ವಾಷಿಂಗ್ಟನ್: ಜಪಾನ್ ಪ್ರಧಾನ ಮಂತ್ರಿ ಫುಮಿಯೊ ಕಿಶಿದಾ ಈ ತಿಂಗಳು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.

ಜಪಾನ್ ಪ್ರಧಾನಿಯವರ ಭೇಟಿ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಶ್ವೇತಭವನದಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ಜನವರಿ 13ರಂದು ನಡೆಯಲಿರುವ ಸಭೆಯಲ್ಲಿ ಉತ್ತರ ಕೊರಿಯಾದ ಅಣ್ವಸ್ತ್ರ ಮತ್ತು ಖಂಡಾಂತರ ಕ್ಷಿಪಣಿ ಪರೀಕ್ಷೆಯ ಆತಂಕದ ಸ್ಥಿತಿಗತಿಯ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೈನ್‌ ಜೀನ್ ಪಿಯರ್ ತಿಳಿಸಿದ್ದಾರೆ.

ADVERTISEMENT

ಆರ್ಥಿಕ ಸವಾಲು, ಉಕ್ರೇನ್ ಮೇಲೆ ರಷ್ಯಾದ ಮಿಲಿಟರಿ ಕಾರ್ಯಾಚರಣೆ, ಹವಾಮಾನ ಬದಲಾವಣೆ ಮತ್ತು ತೈವಾನ್ ಜಲಸಂಧಿ ಪ್ರಮುಖ ಚರ್ಚಾ ವಿಷಯವಾಗಲಿದೆ.

ಜಿ7 ರಾಷ್ಟ್ರಗಳಲ್ಲಿ ಜಪಾನ್‌ ಅಧ್ಯಕ್ಷ ಸ್ಥಾನ ವಹಿಸುವ ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಅಲ್ಲದ ಸದಸ್ಯತ್ವಕ್ಕೆ ಅಮೆರಿಕ ಬೆಂಬಲ ಸೂಚಿಸಲಿದೆ.

ಅಮೆರಿಕ-ಜಪಾನ್ ನಡುವೆ ಬಾಂಧವ್ಯ ವೃದ್ಧಿ ಮತ್ತು ಮತ್ತಷ್ಟು ಪಾಲುದಾರಿಕೆಯನ್ನು ಎದುರು ನೋಡಲಾಗುತ್ತದೆ.

ಉಭಯ ದೇಶಗಳ ನಾಯಕರು 2022 ನವೆಂಬರ್‌ನಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಜಿ20 ಸಭೆಯಲ್ಲಿ ಕೊನೆಯದಾಗಿ ಭೇಟಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.