ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್‌

ಏಜೆನ್ಸೀಸ್
Published 18 ಮಾರ್ಚ್ 2020, 2:53 IST
Last Updated 18 ಮಾರ್ಚ್ 2020, 2:53 IST
ಜೋ ಬಿಡೆನ್
ಜೋ ಬಿಡೆನ್   

ವಾಷಿಂಗ್ಟನ್: ‘ಡೆಮಾಕ್ರಟಿಕ್ ಪಕ್ಷದಿಂದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿ ಜೋ ಬಿಡೆನ್ ಅವರು ವಾಷಿಂಗ್ಟನ್‌ನಲ್ಲಿ
ಗೆಲುವು ಸಾಧಿಸಿದ್ದಾರೆ’ ಎಂದು ಅಮೆರಿಕದ ಮಾಧ್ಯಮ ವರದಿ ಮಾಡಿದೆ.

‘ಸೋಮವಾರ ರಾತ್ರಿ ಮತ ಎಣಿಕೆ ಬಹುತೇಕ ಪೂರ್ಣಗೊಂಡಿದ್ದು, ಅತಿ ಕಡಿಮೆ ಅಂತರದಲ್ಲಿ ಬಿಡೆನ್ ಅವರು ತಮ್ಮ ಪ್ರತಿಸ್ಪರ್ಧಿ ಬರ್ನಿ ಸ್ಯಾಂಡರ್ಸ್‌ ಎದುರು ಗೆಲುವು ಪಡೆದಿದ್ದಾರೆ’ ಎಂದು ಎನ್‌ಬಿಸಿ ಹಾಗೂ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ಬಿಡೆನ್ ಅವರು ಶೇ 37.9 ಹಾಗೂ ಸ್ಯಾಂಡರ್ಸ್‌ ಅವರು ಶೇ 36.4 ಮತ ಗಳಿಸಿದ್ದಾರೆ.

ADVERTISEMENT

ಅರಿಜೋನಾ, ಫ್ಲಾರಿಡಾ ಹಾಗೂ ಇಲಿನಾಯ್ ರಾಜ್ಯಗಳಲ್ಲಿ ಮಂಗಳವಾರ ಚುನಾವಣೆ ನಡೆಯಬೇಕಿದೆ. ಆದರೆ ಕೊರೊನಾ–2 ವೈರಸ್ ಸೋಂಕು ವೇಗವಾಗಿ ಹರಡುತ್ತಿರುವುದರಿಂದಾಗಿ, ಮತಗಟ್ಟೆಗಳ ಸುರಕ್ಷತೆ ಕುರಿತು ಆತಂಕ ಮೂಡಿದೆ. ಒಹಾಯೊದಲ್ಲಿ ಚುನಾವಣೆ ಮುಂದೂಡಿರುವುದಾಗಿ ಅಧಿಕಾರಿಗಳು ಘೋಷಿಸಿದ್ದಾರೆ.

ಮಂಗಳವಾರದ ಚುನಾವಣೆ ಸ್ಯಾಂಡರ್ಸ್‌ ಪಾಲಿಗೆ ನಿರ್ಣಾಯಕವಾಗಲಿದ್ದು, ಬಹುಮತ ಗಳಿಸದೆ ಇದ್ದಲ್ಲಿ ಅವರು ಅಧ್ಯಕ್ಷೀಯ ಚುನಾವಣೆಯಿಂದ ಹೊರನಡೆಯಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.