ADVERTISEMENT

ಕೋವಿಡ್ ಲಸಿಕೆ ಪೂರೈಸಿದ್ದಕ್ಕೆ ಭಾರತಕ್ಕೆ ವಿಶಿಷ್ಟವಾಗಿ ಧನ್ಯವಾದ ತಿಳಿಸಿದ ಕೆನಡಾ

ಏಜೆನ್ಸೀಸ್
Published 11 ಮಾರ್ಚ್ 2021, 9:05 IST
Last Updated 11 ಮಾರ್ಚ್ 2021, 9:05 IST
ಅದಿತ್ಯ ರಾಜ್ ಕೌಲ್ ಟ್ವಿಟರ್ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್
ಅದಿತ್ಯ ರಾಜ್ ಕೌಲ್ ಟ್ವಿಟರ್ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್   

ಟೊರೊಂಟೊ:ಕೆನಡಾಕ್ಕೆ ಕೋವಿಡ್ 19 ಲಸಿಕೆಗಳನ್ನು ಪೂರೈಸಿದ ಭಾರತ ದೇಶ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಆ ದೇಶವು ವಿಶಿಷ್ಟವಾಗಿ ಧನ್ಯವಾದ ತಿಳಿಸಿದೆ.

ಗ್ರೇಟರ್ ಟೊರೊಂಟೊ ಪ್ರದೇಶದಲ್ಲಿ ಜಾಹೀರಾತು ಫಲಕಗಳಲ್ಲಿ ಮೋದಿ ಭಾವಚಿತ್ರ ಹಾಕಿ ಧನ್ಯವಾದ ತಿಳಿಸಲಾಗಿದೆ. ಕೆನಡಾಗೆ ಲಸಿಕೆ ಪೂರೈಸಿದ್ದಕ್ಕೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆಧನ್ಯವಾದ. ಭಾರತ ಮತ್ತು ಕೆನಡಾ ಸ್ನೇಹ ಚಿರಕಾಲ ಇರಲಿದೆ ಎಂದು ಜಾಹೀರಾತು ಫಲಕದಲ್ಲಿ ಕೆನಡಾ ಧನ್ಯವಾದ ತಿಳಿಸಿದೆ.

ವಿಶ್ವದ ವಿವಿಧ ರಾಷ್ಟ್ರಗಳಿಗೆ ಲಸಿಕೆಗಳನ್ನು ಪೂರೈಸುವಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಮಿತ್ರರಾಷ್ಟ್ರಗಳ ಜೊತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಯಂತಹ ಜಾಗತಿಕ ಸಂಸ್ಥೆಗಳಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.

ADVERTISEMENT

ಕಳೆದ ವಾರ, ಕೆನಡಾವು 500,000 ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಪಡೆದುಕೊಂಡಿದೆ. ಕೆನಡಾದ ಪಾಲುದಾರ ಸಂಸ್ಥೆ ವೆರಿಟಿ ಫಾರ್ಮಾಸ್ಯುಟಿಕಲ್ಸ್ ಈ ಲಸಿಕೆಗಳನ್ನು ಸ್ವೀಕರಿಸಿದೆ.

ಕೆಲ ದಿನಗಳ ಹಿಂದಷ್ಟೇ, ವರ್ಚುವಲ್ ಇಂಡಿಯಾ-ಸ್ವೀಡನ್ ಶೃಂಗಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಇದುವರೆಗೆ 50ಕ್ಕೂ ಹೆಚ್ಚು ದೇಶಗಳಿಗೆ 'ಮೇಡ್-ಇನ್-ಇಂಡಿಯಾ' ಲಸಿಕೆಗಳನ್ನು ಸರಬರಾಜು ಮಾಡಲಾಗಿದೆ ಎಂದು ಹೇಳಿದ್ದರು. ಮುಂಬರುವ ಕೆಲ ತಿಂಗಳುಗಳಲ್ಲಿ ಮತ್ತಷ್ಟು ದೇಶಗಳಿಗೆ ಲಸಿಕೆಗಳನ್ನು ಪೂರೈಸುವ ಯೋಜನೆ ನಮ್ಮದಾಗಿದೆ ಎಂದು ಅವರು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.