ADVERTISEMENT

ಚೀನಾದ 10 ಪ್ರಾಂತ್ಯಗಳಲ್ಲಿ ಜನನ ಪ್ರಮಾಣ ಶೇ 1 ಇಳಿಕೆ

ಪಿಟಿಐ
Published 5 ಜನವರಿ 2022, 14:28 IST
Last Updated 5 ಜನವರಿ 2022, 14:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್‌: ದಂಪತಿ ಮೂರು ಮಕ್ಕಳನ್ನು ಹೊಂದುವ ಹೊಸ ನೀತಿಯನ್ನು ದೇಶದಲ್ಲಿ ಪರಿಚಯಿಸಿದ ನಂತರವೂ ‌2020ರಲ್ಲಿ ಚೀನಾದ 10 ಪ್ರಾಂತ್ಯ‌ಗಳ ಮಟ್ಟದಲ್ಲಿ ಜನಸಂಖ್ಯೆಯು ಶೇ 1 ರಷ್ಟು ಇಳಿಕೆಯಾಗಿದೆ.

ದಶಕಗಳ ಹಿಂದಿನ ಒಂದು ಮಗುವಿನ ನೀತಿಯಿಂದ ದೇಶವು ತೀವ್ರ ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸಿದ ನಂತರದಲ್ಲಿ ಚೀನಾ ಕಳೆದ ವರ್ಷದ ಆಗಸ್ಟ್‌ನಲ್ಲಿ ಮೂರು ಮಗುವಿನ ನೀತಿಯನ್ನು ಜಾರಿಗೊಳಿಸಿತ್ತು. ಎಲ್ಲಾ ದಂಪತಿ 2 ಮಕ್ಕಳನ್ನು ಹೊಂದಬಹುದು ಎಂದು 2016ರಲ್ಲಿ ಚೀನಾ ಹೇಳಿತ್ತು. ನಂತರದಲ್ಲಿ ಮೂರು ಮಕ್ಕಳನ್ನು ಹೊಂದಲು ಅನುಮತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT