ADVERTISEMENT

ಅಫ್ಗಾನ್ ಮಸೀದಿಯಲ್ಲಿ ಸ್ಫೋಟ: ಧರ್ಮಗುರು, ನಾಗರಿಕರ ಸಾವು

ರಾಯಿಟರ್ಸ್
Published 2 ಸೆಪ್ಟೆಂಬರ್ 2022, 10:59 IST
Last Updated 2 ಸೆಪ್ಟೆಂಬರ್ 2022, 10:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಬೂಲ್:ಪಶ್ಚಿಮ ಅಫ್ಗಾನಿಸ್ತಾನದ ಹೆರಾತ್ ನಗರದ ಮಸೀದಿ ಹೊರಗೆ ಶುಕ್ರವಾರ ನಡೆದ ಸ್ಫೋಟದಲ್ಲಿ ತಾಲಿಬಾನ್ ಪರ ಉನ್ನತ ಮಟ್ಟದ ಧರ್ಮಗುರುಗಳು ಮತ್ತು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮುಜೀಬ್ ರೆಹಮಾನ್ ಅನ್ಸಾರಿ ಮತ್ತು ಅವರ ಕೆಲ ಸಿಬ್ಬಂದಿ ಹಾಗೂ ನಾಗರಿಕರು ಮಸೀದಿಯ ಕಡೆಗೆ ಹೋಗುತ್ತಿದ್ದ ವೇಳೆ ಸಾವಿಗೀಡಾಗಿದ್ದಾರೆ.ಸ್ಫೋಟದಿಂದ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ’ ಎಂದು ಪೊಲೀಸ್ ವಕ್ತಾರ ಮಹಮೂದ್ ರಸೋಲಿ ಹೇಳಿದ್ದಾರೆ.

ಹೆಸರು ಬಹಿರಂಗಪಡಿಸದ ಮೂಲಗಳ ಪ್ರಕಾರ 14 ಜನರು ಮೃತಪಟ್ಟಿದ್ದಾರೆ ಎಂದುಅಲ್ ಜಜೀರಾ ಮೀಡಿಯಾ ನೆಟ್‌ವರ್ಕ್ ತಿಳಿಸಿದೆ.

ADVERTISEMENT

ಜೂನ್ ಅಂತ್ಯದಲ್ಲಿ ಸಂಘಟನೆ ಆಯೋಜಿಸಿದ್ದ ವಿದ್ವಾಂಸರು ಮತ್ತು ಹಿರಿಯರ ಸಭೆಯಲ್ಲಿ ತಾಲಿಬಾನ್‌ ಪರವಾಗಿ ಮುಜಿಬ್ ರೆಹಮಾನ್ ಅನ್ಸಾರಿ ಮಾತನಾಡಿದ್ದರು.

ವರ್ಷದ ಹಿಂದೆ ಅಧಿಕಾರ ವಹಿಸಿಕೊಂಡ ನಂತರ ದೇಶದಲ್ಲಿ ಭದ್ರತೆ ಸುಧಾರಿಸಿದೆ ಎಂದುತಾಲಿಬಾನ್ ಹೇಳುತ್ತಿದೆ. ಆದರೆ, ಕೆಲ ತಿಂಗಳಿನಿಂದ ಹಲವು ಸ್ಫೋಟಗಳು ನಡೆದಿದ್ದು, ಪ್ರಾರ್ಥನೆ ಸಮಯದಲ್ಲಿ ಮಸೀದಿಗಳನ್ನು ಗುರಿಯಾಗಿಸಿಕೊಂಡಿವೆ. ಹೆಚ್ಚುತ್ತಿರುವ ದಾಳಿಗಳ ಬಗ್ಗೆವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.