ADVERTISEMENT

ಬ್ರಿಟನ್: ಆಡಳಿತ ಪಕ್ಷದ ಅಧ್ಯಕ್ಷ ರಾಜೀನಾಮೆ, ಪ್ರಧಾನಿ ಜಾನ್ಸನ್‌ಗೆ ಭಾರಿ ಹಿನ್ನಡೆ

ಪಿಟಿಐ
Published 24 ಜೂನ್ 2022, 13:26 IST
Last Updated 24 ಜೂನ್ 2022, 13:26 IST
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್    

ಲಂಡನ್‌: ಇತ್ತೀಚೆಗೆ ನಡೆದ ಎರಡು ಪ್ರಮುಖ ಉಪಚುನಾವಣೆಗಳಲ್ಲಿ ಆಡಳಿತಾರೂಢ ಕನ್ಸರ್‌ವೇಟಿವ್ ಪಾರ್ಟಿಗೆ ಹೀನಾಯ ಸೋಲು ಆಗಿದ್ದು, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಭಾರಿ ಹಿನ್ನಡೆ ಉಂಟಾಗಿದೆ.

ಈ ಸೋಲು, ಜಾನ್ಸನ್‌ ಅವರ ಆಪ್ತರೂ ಆಗಿರುವ ಪಕ್ಷದ ಅಧ್ಯಕ್ಷ ಆಲಿವರ್‌ ಡೌಡೆನ್‌ ರಾಜೀನಾಮೆ ನೀಡುವಂತೆ ಮಾಡಿದೆ. ಅಲ್ಲದೇ, ಬೋರಿಸ್‌ ಅವರ ನಾಯಕತ್ವವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಉತ್ತರ ಇಂಗ್ಲೆಂಡ್‌ನ ವೇಕ್‌ಫೀಲ್ಡ್‌, ದಕ್ಷಿಣ ಇಂಗ್ಲೆಂಡಿನ ಟಿವರ್ಟನ್ ಮತ್ತು ಹೊನಿಟನ್‌ ಕ್ಷೇತ್ರಗಳಲ್ಲಿ ಕನ್ಸರ್ವೆಟಿವ್ ಪಕ್ಷದ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಈ ಉಪಚುನಾವಣೆಗಳ ಫಲಿತಾಂಶವನ್ನು ಬೋರಿಸ್‌ ಜಾನ್ಸನ್ ಅವರ ಪಕ್ಷದ ನಾಯಕತ್ವಕ್ಕೆ ಸಿಕ್ಕಿರುವ ಜನಾಭಿಪ್ರಾಯ ಎಂದೇ ಅರ್ಥೈಸಲಾಗುತ್ತಿದೆ.

ADVERTISEMENT

ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನಡೆಸಿದ ಸಂತೋಷಕೂಟದ ‘ಪಾರ್ಟಿ ಗೇಟ್‌’ ಹಗರಣವು ಜಾನ್ಸನ್‌ ಅವರಿಗೆ ಈ ಉಪಚುನಾವಣೆಯಲ್ಲಿ ಭಾರಿ ಪೆಟ್ಟು ಕೊಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.