ADVERTISEMENT

ಪಶ್ಚಿಮ ಆಫ್ರಿಕಾದ ಮರುಭೂಮಿಯಲ್ಲಿ 27 ವಲಸಿಗರ ಶವಗಳು ಪತ್ತೆ

ಏಜೆನ್ಸೀಸ್
Published 14 ಡಿಸೆಂಬರ್ 2022, 11:34 IST
Last Updated 14 ಡಿಸೆಂಬರ್ 2022, 11:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಡಾಕರ್: ಪಶ್ಚಿಮ ಆಫ್ರಿಕಾದ ಚಡಿಯನ್‌ ಮರುಭೂಮಿಯಲ್ಲಿ ನಾಲ್ಕು ಮಕ್ಕಳು ಸೇರಿದಂತೆ 27 ಮಂದಿ ವಲಸಿಗರ ಶವಗಳು ಪತ್ತೆಯಾಗಿವೆ ಎಂದು ವಲಸಿಗರಅಂತರರಾಷ್ಟ್ರೀಯ ಸಂಸ್ಥೆ (ಐಒಎಂ) ಮಂಗಳವಾರ ತಿಳಿಸಿದೆ.

ಒಂದೂವರೆ ವರ್ಷದ ಹಿಂದೆ ಮುಸುರೋ ನಗರದಿಂದ ಟ್ರಕ್‌ನಲ್ಲಿ ಹೊರಟಿದ್ದ ವಲಸಿಗರು ದಾರಿತಪ್ಪಿರುವ ಸಾಧ್ಯತೆ ಇದ್ದು, ಬಾಯಾರಿಕೆ, ಹಸಿವಿನಿಂದ ಸತ್ತಿರಬಹುದು. ಇದು ಅಘಾತಕಾರಿ, ದುಃಖಕರ ಸಂಗತಿಎಂದು ವಿಶ್ವಸಂಸ್ಥೆಗೆ ಸಂಯೋಜಿತವಾಗಿರುವ ಸಂಸ್ಥೆ ಹೇಳಿದೆ.

ಭವಿಷ್ಯದಲ್ಲಿ ಇಂತಹ ಸಾವುಗಳನ್ನು ಸಂಘಟಿತ ಕ್ರಮ ಅಗತ್ಯ. ಎಂಟು ವರ್ಷಗಳಲ್ಲಿ ಸಹರಾ ಮರುಭೂಮಿಯಲ್ಲಿ 5600 ಮಂದಿ ಮೃತ
ಪಟ್ಟಿದ್ದಾರೆ ಇಲ್ಲವೇ ನಾಪತ್ತೆಯಾಗಿದ್ದಾರೆ. ಈ ಪೈಕಿ 110 ಮಂದಿ ಚಡಿಯನ್‌ ಮರುಭೂಮಿಯಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ADVERTISEMENT

ಪಶ್ಚಿಮ ಆಫ್ರಿಕಾದಿಂದ ಲಿಬಿಯಾ ಮತ್ತು ಇತರೆ ಉತ್ತರ ಆಫ್ರಿಕಾ ದೇಶಗಳಿಗೆ ವಲಸಿಗರು ಚಡಿಯನ್‌ ಮರುಭೂಮಿ ಮೂಲಕ ತೆರಳಲು ಯತ್ನಿಸುತ್ತಾರೆ. ಹಲವು ಸಾವುಗಳು ಸಂಭವಿಸುತ್ತಿದ್ದು, ಅಪಾಯಕಾರಿಯಾದ ಮಾರ್ಗವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.