
ಡೇವಿಡ್ ಸಲೊವಿ
- ಎಕ್ಸ್ ಚಿತ್ರ
ಲಂಡನ್: ಹಂಗೇರಿ ಮೂಲದ ಬ್ರಿಟಿಷ್ ಲೇಖಕ ಡೇವಿಡ್ ಸಲೊವಿ ಅವರು 2025ರ ಬೂಕರ್ ಪ್ರಶಸ್ತಿ ಗೆದ್ದಿದ್ದಾರೆ. ಅವರ ‘ಫ್ಲೆಶ್” (Flesh) ಕೃತಿಗೆ ಈ ಪ್ರಶಸ್ತಿ ಲಭಿಸಿದೆ.
ಭಾರತ ಮೂಲದ ಕಿರಣ್ ದೇಸಾಯಿಯವರ ‘ದಿ ಲೋನ್ಲಿನೆಸ್ ಆಫ್ ಸೋನಿಯಾ ಆ್ಯಂಡ್ ಸನ್ನಿ’ (The Loneliness of Sonia and Sunny) ಕೃತಿಯೂ ಬೂಕರ್ ಪ್ರಶಸ್ತಿ ಸ್ಪರ್ಧೆಯಲ್ಲಿತ್ತು. ಅವರಿಗೆ ಸ್ವಲ್ಪದರಲ್ಲೇ ಪ್ರಶಸ್ತಿ ತಪ್ಪಿದೆ.
51 ವರ್ಷದ ಸಲೊವಿ ಅವರಿಗೆ ಕಳೆದ ವರ್ಷದ ಬೂಕರ್ ಪ್ರಶಸ್ತಿ ವಿಜೇತೆ ಸಮಂತಾ ಹಾರ್ವಿಯವರು ಟ್ರೋಫಿ ನೀಡಿದರು. ಈ ಪ್ರಶಸ್ತಿ 50 ಸಾವಿರ ಪೌಂಡ್ ಹಣ ಒಳಗೊಂಡಿದೆ.
ಲಂಡನ್‌ನ ಬಿಲ್ಲಿಂಗ್ಸ್‌ಗೇಟ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.
ಒಂದು ವೇಳೆ ದೇಸಾಯಿಯವರಿಗೆ ಪ್ರಶಸ್ತಿ ದೊರಕಿದ್ದರೆ, 56 ವರ್ಷ ಬೂಕರ್ ಇತಿಹಾಸದಲ್ಲಿ ಎರಡೆರಡು ಬಾರಿ ಪ್ರಶಸ್ತಿ ಗೆದ್ದ ಐದನೇ ವ್ಯಕ್ತಿ ಎನ್ನುವ ಗೌರವಕ್ಕೆ ಪಾತ್ರರಾಗುತ್ತಿದ್ದರು. 2006ರಲ್ಲಿ ಅವರ ‘ದಿ ಇನ್‌ಹೆರಿಟೆನ್ಸ್ ಆಫ್ ಲಾಸ್’ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.