ADVERTISEMENT

ಬೂಕರ್‌ ಪ್ರಶಸ್ತಿ ವಿಜೇತೆ ಹಿಲರಿ ಮಾಂಟೆಲ್‌ ನಿಧನ

ಏಜೆನ್ಸೀಸ್
Published 23 ಸೆಪ್ಟೆಂಬರ್ 2022, 13:41 IST
Last Updated 23 ಸೆಪ್ಟೆಂಬರ್ 2022, 13:41 IST
ಹಿಲರಿ ಮಾಂಟೆಲ್‌
ಹಿಲರಿ ಮಾಂಟೆಲ್‌   

ಲಂಡನ್‌: ಎರಡು ಬಾರಿ ಪ್ರತಿಷ್ಠಿತ ಬೂಕರ್‌ ಪ್ರಶಸ್ತಿಗೆ ಭಾಜನರಾದ ಮೊದಲ ಬ್ರಿಟಿಷ್‌ ಲೇಖಕಿ, ಕಾದಂಬರಿಗಾರ್ತಿ ಹಿಲರಿ ಮಾಂಟೆಲ್ (70) ನಿಧನರಾದರು ಎಂದು ಪ್ರಕಾಶಕ ಸಂಸ್ಥೆ 4ನೇ ಎಸ್ಟೇಟ್ ಬುಕ್ಸ್ ಶುಕ್ರವಾರ ತಿಳಿಸಿದೆ.

ವೂಲ್ಫ್‌ ಹಾಲ್‌ ಮತ್ತು ಬ್ರಿಂಗ್‌ ಅಪ್‌ ದ ಬಾಡೀಸ್‌ ಕೃತಿಗೆ ಮಾಂಟೆಲ್‌ ಅವರಿಗೆ ಬೂಕರ್‌ ಪ್ರಶಸ್ತಿ ಲಭಿಸಿತ್ತು.

‘ಪ್ರೀತಿಯ ಲೇಖಕಿ ಹಿಲರಿ ಮಾಂಟೆಲ್‌ ಅವರ ನಿಧನ ಆಘಾತ ಉಂಟುಮಾಡಿದೆ. ಇವರ ಅಗಲಿಕೆ ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟ. ಅತ್ಯುತ್ಕೃಷ್ಟವಾದ ಕೃತಿಗಳನ್ನುನೀಡಿದ್ದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ’ ಎಂದು ಪ್ರಕಾಶಕ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.