ADVERTISEMENT

ನಾನು ಮೃತಪಟ್ಟಿದ್ದರೆ ಪರಿಸ್ಥಿತಿ ಎದುರಿಸಲು ಸಿದ್ಧತೆ ನಡೆದಿತ್ತು: ಬೋರಿಸ್‌

ಪಿಟಿಐ
Published 4 ಮೇ 2020, 1:47 IST
Last Updated 4 ಮೇ 2020, 1:47 IST
ಬೋರಿಸ್‌ ಜಾನ್ಸನ್‌ 
ಬೋರಿಸ್‌ ಜಾನ್ಸನ್‌    

ಲಂಡನ್‌: ಕೊರೊನಾ ಸೋಂಕಿನ ಚಿಕಿತ್ಸೆ ವೇಳೆ ಪರಿಸ್ಥಿತಿ ಕೈಮೀರಿ ನಾನು ಮೃತಪಟ್ಟಿದ್ದರೆ ಆ ಸಂದರ್ಭ ನಿರ್ವಹಿಸಲು ಸಂಭವನೀಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಹೇಳಿದ್ದಾರೆ.

ದಿ ಸನ್‌ ಆನ್‌ ಸಂಡೆ ಪತ್ರಿಕೆಗೆ ಸಂದರ್ಶನ ನೀಡಿದ ಅವರು, ಅದೊಂದು ಸಂಕಷ್ಟದ ಸಮಯವಾಗಿತ್ತು ಎಂಬುದನ್ನು ನಾನು ನಿರಾಕರಿಸುವುದಿಲ್ಲ. ದಿ ಡೆತ್‌ ಆಫ್‌ ಸ್ಟಾಲಿನ್‌ ಚಿತ್ರದ ರೀತಿಯಲ್ಲಿ ಪರಿಸ್ಥಿತಿ ನಿಭಾಯಿಸಲು ಸಿದ್ಧತೆಯಾಗಿತ್ತು ಎನ್ನುವುದು ನನಗೆ ಅರಿವಿತ್ತು ಎಂದು ಹೇಳಿದ್ದಾರೆ.

‘ತೀವ್ರ ನಿಗಾ ಘಟಕಕ್ಕೆ ದಾಖಲಾದ ಬಳಿಕ ದೀರ್ಘಾವಧಿಗೆ ನನಗೆ ಸಾಕಷ್ಟು ಆಮ್ಲಜನಕ ಪೂರೈಸಲಾಯಿತು’ ಎಂದು ಅವರು ತಿಳಿಸಿದ್ದಾರೆ.

ADVERTISEMENT

’ಸೋಂಕು ದೃಢಪಟ್ಟ ಬಳಿಕ ಪರಿಸ್ಥಿತಿ ಗಂಭೀರವಾಗಿದೆ ಎನ್ನುವುದನ್ನು ನಿರಾಕರಿಸಿದ್ದೆ’ ಎಂದು ಒಪ್ಪಿಕೊಂಡ ಅವರು, ‘ಆಸ್ಪತ್ರೆಗೆ ಹೋಗಲು ನಾನು ಒಪ್ಪಿರಲಿಲ್ಲ. ಆದರೆ ವೈದ್ಯರು ಹಟ ಮಾಡಿದರು. ಈಗ ಯೋಚಿಸಿದರೆ ಅವರು ನನ್ನನ್ನು ಬಲವಂತವಾಗಿ ಆಸ್ಪತ್ರೆಗೆ ಸೇರಿಸಿದ್ದು ಸರಿಯಾಗಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.