ADVERTISEMENT

ಬ್ರೆಜಿಲ್‌: ಕೊರೊನಾದಿಂದ ಜಗತ್ತಿನಲ್ಲಿ ಎರಡನೇ ಅತಿ ಹೆಚ್ಚು ಸಾವು ಕಂಡ ರಾಷ್ಟ್ರ

ಏಜೆನ್ಸೀಸ್
Published 22 ಜೂನ್ 2020, 1:17 IST
Last Updated 22 ಜೂನ್ 2020, 1:17 IST
ಬ್ರೆಜಿಲ್‌ನ ಸಾವೊ ಪೌಲೊದಲ್ಲಿನ ಸ್ಮಶಾನವೊಂದರಲ್ಲಿ ಶವ ಸಂಸ್ಕಾರಕ್ಕೆ ಸಿದ್ಧತೆ ನಡೆದಿರುವುದು–ಪಿಟಿಐ ಚಿತ್ರ
ಬ್ರೆಜಿಲ್‌ನ ಸಾವೊ ಪೌಲೊದಲ್ಲಿನ ಸ್ಮಶಾನವೊಂದರಲ್ಲಿ ಶವ ಸಂಸ್ಕಾರಕ್ಕೆ ಸಿದ್ಧತೆ ನಡೆದಿರುವುದು–ಪಿಟಿಐ ಚಿತ್ರ   
""

ಬ್ರೆಸಿಲಿಯಾ: ಜಗತ್ತಿನಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ ಸಾವಿಗೀಡಾದವರ ಪೈಕಿ ಎರಡನೇ ಸ್ಥಾನಕ್ಕೆ ಜಿಗಿದಿರುವ ಬ್ರೆಜಿಲ್‌ನಲ್ಲಿ ಒಟ್ಟು ಸಾವಿನ ಸಂಖ್ಯೆ 50,000 ದಾಟಿದೆ.

ಕಳೆದ 24 ಗಂಟೆಗಳಲ್ಲಿ 17,400 ಹೊಸ ಪ್ರಕರಣಗಳು ಹಾಗೂ ಸೋಂಕಿನಿಂದ 640 ಮಂದಿ ಸಾವಿಗೀಡಾಗಿರುವುದಾಗಿ ಬ್ರೆಜಿಲ್‌ ಆರೋಗ್ಯ ಸಚಿವಾಲಯ ಹೇಳಿದೆ.

ಈ ಮೂಲಕ ಬ್ರೆಜಿಲ್‌ನಲ್ಲಿ ಒಟ್ಟು ಕೋವಿಡ್–19 ಪ್ರಕರಣಗಳ ಸಂಖ್ಯೆ 10,85,038 ತಲುಪಿದ್ದು, ಸೋಂಕಿನಿಂದ 50,617 ಮಂದಿ ಮೃತಪಟ್ಟಿದ್ದಾರೆ. 5,50,000 ಗುಣಮುಖರಾಗಿದ್ದಾರೆ.

ADVERTISEMENT

ಶನಿವಾರ ಒಂದೇ ದಿನ 35,000 ಹೊಸ ಪ್ರಕರಣಗಳು ಹಾಗೂ 1,000 ಸಾವು ವರದಿಯಾಗಿತ್ತು. ಅಮೆರಿಕದಲ್ಲಿ ಕೋವಿಡ್–19ನಿಂದ ಈವರೆಗೆ 1,19,900 ಜನರು ಮೃತಪಟ್ಟಿದ್ದಾರೆ. ಅಲ್ಲಿನ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 22,00,000 ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.