ADVERTISEMENT

ಸೋತು ಅಮೆರಿಕಕ್ಕೆ ಪಲಾಯನ ಮಾಡಿ ಆಸ್ಪತ್ರೆ ಸೇರಿದ ಬಲಪಂಥೀಯ ನಾಯಕ ಬೋಲ್ಸನಾರೊ

ಚುನಾವಣೆ ಸೋತು ಅಮೆರಿಕಕ್ಕೆ ಪಲಾಯನ ಮಾಡಿರುವ ಬಲಪಂಥೀಯ ನಾಯಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜನವರಿ 2023, 3:01 IST
Last Updated 10 ಜನವರಿ 2023, 3:01 IST
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೋಲ್ಸನರೊ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೋಲ್ಸನರೊ   

ಬ್ರಸಿಲಾ: ಬ್ರೆಜಿಲ್‌ನ ಬಲಪಂಥೀಯ ನಾಯಕ, ಮಾಜಿ ಅಧ್ಯಕ್ಷ ಜೈರ್‌ ಬೋಲ್ಸನಾರೊ ಅವರು ಅಮೆರಿಕದ ಫ್ಲೊರಿಡಾದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಪತ್ನಿ ಹೇಳಿದ್ದಾರೆ. ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಸೇರಿದ್ದಾರೆ.

67 ವರ್ಷದ ಬೋಲ್ಸನಾರೊ ಅವರು, ಫ್ಲೊರಿಡಾದ ಹೊರವಲಯದ ಒರ್ಲಾಂಡೋದಲ್ಲಿರುವ ಅವೆಂಡ್‌ ಹೆಲ್ತ್‌ ಸಲೆಬ್ರೆಷನ್‌ ಅಕ್ಯೂಟ್‌ ಕೇರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಬೋಲ್ಸೊನರೋ ಅವರು ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿದ್ದಾರೆ. 2018ರಲ್ಲಿ ಅವರು ಅವರಿಗೆ ಉಂಟಾದ ಇರಿತದಂಥ ದಾಳಿಯಿಂದಾಗಿ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ‘ ಅವರ ಪತ್ನಿ ಮಿಶೆಲ್ ಬೋಲ್ಸನಾರೊ ಇನ್‌ಸ್ಟಾ‌ಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

2022ರ ವರ್ಷಾಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ಸೋತ ಬಳಿಕ ಬೋಲ್ಸನಾರೊ ಅವರು ಹೊಸ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸುವ ಸಾಂಪ್ರದಾಯವನ್ನೂ ಪಾಲಿಸದೆ ಅಮೆರಿಕಕ್ಕೆ ಪಲಾಯನ ಮಾಡಿದ್ದರು.

ಎಡಪಂಥೀಯ ನಾಯಕ ಲೂಯಿಜ್‌ ಇನಾಸಿಯೋ ಲುಲಾ ಡಾ ಸಿಲ್ವಾ ಅವರ ವಿರುದ್ಧ ಸೋಲುಭವಿಸಿದ್ದ ಬೋಲ್ಸನಾರೊ, ಜನವರಿ 1 ರಂದು ಅಧಿಕಾರ ಹಸ್ತಾಂತರ ಮಾಡಬೇಕಿತ್ತು. ಆದರೆ ಡಿಸೆಂಬರ್ 28 ರಂದೇ ಅವರು ದೇಶ ತೊರೆದು ಅಮೆರಿಕಕ್ಕೆ ಪಲಾಯನ ಮಾಡಿದ್ದರು.

ಅವರ ಪಕ್ಷದ ಕಾರ್ಯಕರ್ತರು ಬ್ರೆಜಿಲ್‌ನಲ್ಲಿ ದಾಂಧಲೆ ನಡೆಸುತ್ತಿದ್ದು, ಸಂಸತ್‌ ಕಟ್ಟಡ, ಕೋರ್ಟ್‌ ಕಟ್ಟಡಗಳಿಗೆ ಮುತ್ತಿಗೆ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.