ADVERTISEMENT

‘ವಿವೇಚನಾರಹಿತ’ ರೂಪದಲ್ಲಿ ಸುಂಕ ಹೇರಿಕೆ: ‘ಬ್ರಿಕ್ಸ್‌’ ರಾಷ್ಟ್ರಗಳ ಕಳವಳ

ಪಿಟಿಐ
Published 27 ಸೆಪ್ಟೆಂಬರ್ 2025, 15:50 IST
Last Updated 27 ಸೆಪ್ಟೆಂಬರ್ 2025, 15:50 IST
   

ವಿಶ್ವಸಂಸ್ಥೆ/ನ್ಯೂಯಾರ್ಕ್‌: ‘ವಿವೇಚನಾರಹಿತ’ ರೂಪದಲ್ಲಿ ಸುಂಕಗಳನ್ನು ಏರಿಕೆ ಮಾಡುವುದು ಹಾಗೂ ವ್ಯಾಪಾರದ ಮೇಲೆ ನಿರ್ಬಂಧ ಹೇರುವಂತ ಕ್ರಮಗಳ ಕುರಿತು ‘ಬ್ರಿಕ್ಸ್‌’ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. 

ಅದರಲ್ಲೂ ಸುಂಕವನ್ನು ಬಲವಂತದ ಸಾಧನವನ್ನಾಗಿ ಬಳಸುವ ಕ್ರಮಗಳು ಮತ್ತು ಅಂಥ ಅಭ್ಯಾಸಗಳು ದಕ್ಷಿಣ ರಾಷ್ಟ್ರಗಳನ್ನು ಹಿಂದೆ ಸರಿಸುವ ಅಪಾಯವನ್ನುಂಟು ಮಾಡುತ್ತವೆ. ಜಾಗತಿಕ ವ್ಯಾಪಾರವನ್ನು ಹಾಳು ಮಾಡುತ್ತವೆ ಎಂದು ಎಚ್ಚರಿಸಿವೆ. 

‘ಸುಂಕ ಹೇರಿಕೆಯನ್ನು ಬಲವಂತದ ಸಾಧನವನ್ನಾಗಿ ಬಳಸುವುದು, ಜಾಗತಿಕ ಪೂರೈಕೆ ಸರಪಳಿಗೆ ಅಡ್ಡಿಯನ್ನುಂಟುಮಾಡುತ್ತದೆ. ಅಂತರರಾಷ್ಟ್ರೀಯ ವ್ಯಾಪಾರ, ಆರ್ಥಿಕ ಚಟುವಟಿಕೆಗಳಲ್ಲಿ ಅನಿಶ್ಚಿತತೆಯನ್ನುಂಟು ಮಾಡುತ್ತವೆ ಮತ್ತು ಆರ್ಥಿಕ ಅಸಮಾನತೆಗೆ ಕಾರಣವಾಗುತ್ತವೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು’ ಎಂದು ಇಲ್ಲಿ ನಡೆದ ಸಭೆ ಬಳಿಕ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ADVERTISEMENT

ಅಮೆರಿಕವು ಭಾರತದ ಮೇಲೆ ಇತ್ತೀಚೆಗೆ ಶೇ 50ರಷ್ಟು ಸುಂಕ ಹೇರಿದೆ. ರಷ್ಯಾದಿಂದ ತೈಲ ಖರೀದಿಸುತ್ತಿರುವುದರಿಂದ ಶೇ25ರಷ್ಟು ದಂಡವನ್ನೂ ವಿಧಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.