ನ್ಯೂಯಾರ್ಕ್: ಹೆಚ್ಚುತ್ತಿರುವ ರಕ್ಷಣಾ ನೀತಿ, ಸುಂಕದ ಏರಿಳಿತಗಳು ಹಾಗೂ ಇತರ ಅಡೆತಡೆಗಳು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಜಾಗತಿಕ ವ್ಯಾಪಾರ ಸಂಬಂಧವನ್ನು ರಕ್ಷಿಸುವಂತೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ‘ಬ್ರಿಕ್ಸ್’ಗೆ ಕರೆ ನೀಡಿದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಉನ್ನತ ಮಟ್ಟದ ಸಭೆಯ (ಯುಎನ್‌ಜಿಎ) ಸಂದರ್ಭದಲ್ಲಿ ‘ಬ್ರಿಕ್ಸ್’ ದೇಶಗಳ ವಿದೇಶಾಂಗ ಸಚಿವರ ಸಭೆಯು ಭಾರತದ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
‘ಬಹುಪಕ್ಷೀಯತೆಯು ಒತ್ತಡದಲ್ಲಿದ್ದಾಗ, ರಚನಾತ್ಮಕ ಬದಲಾವಣೆಯ ಗಟ್ಟಿ ದನಿಯಾಗಿ ‘ಬ್ರಿಕ್ಸ್’ ನಿಂತಿದೆ. ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಶಾಂತಿ ಸ್ಥಾಪನೆ, ಮಾತುಕತೆ, ರಾಜತಾಂತ್ರಿಕತೆ ಹಾಗೂ ಅಂತರರಾಷ್ಟ್ರೀಯ ಕಾನೂನಿನ ಪಾಲನೆಯನ್ನು, ‘ಬ್ರಿಕ್ಸ್’ ಬಲಪಡಿಸಬೇಕು’ ಎಂದು ಜೈಶಂಕರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
2026ರಲ್ಲಿ ಭಾರತವು ‘ಬ್ರಿಕ್ಸ್’ ಅಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಕುರಿತು ಮಾತನಾಡಿದ ಅವರು, ‘ಡಿಜಟಲೀಕರಣ, ಸ್ಟಾರ್ಟ್‌ಅಪ್‌ಗಳು, ನಾವೀನ್ಯತೆ ಮತ್ತು ಅಭಿವೃದ್ಧಿ ಪಾಲುದಾರಿಕೆಗಳ ಮೂಲಕ ಆಹಾರ, ಇಂಧನ, ಹವಾಮಾನ ಹಾಗೂ ಸುಸ್ಥಿರ ಅಭಿವೃದ್ಧಿಯ ಮೇಲೆ ದೇಶವು ಕೇಂದ್ರೀಕರಿಸಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.