ಲಂಡನ್: ವೆಸ್ಟ್‌ಮಿನ್‌ಸ್ಟರ್ ಅಬೆನಲ್ಲಿ ಸೋಮವಾರ ನಡೆಯಲಿರುವ ಬ್ರಿಟನ್ ರಾಣಿ 2ನೇ ಎಲಿಜಬೆತ್ ಅವರ ಅಂತ್ಯಸಂಸ್ಕಾರದ ವೇಳೆ ಬ್ರಿಟನ್‌ನಾದ್ಯಂತ ಎರಡು ನಿಮಿಷಗಳ ಕಾಲ ಮೌನ ಆಚರಿಸಲಾಗುವುದು ಎಂದು ಬಕ್ಕಿಂಗ್‌ಹ್ಯಾಂ ಅರಮನೆ ಮೂಲಗಳು ಗುರುವಾರ ತಿಳಿಸಿವೆ.
ವಿಂಡ್ಸರ್‌ನಲ್ಲಿರುವ ಪತಿ ಪ್ರಿನ್ಸ್ ಫಿಲಿಪ್ ಅವರ ಸಮಾಧಿ ಪಕ್ಕವೇ ಎಲಿಜಬೆತ್ ಅವರನ್ನೂ ಸಮಾಧಿ ಮಾಡಲಾಗುವುದು ಎಂದೂ ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.