ADVERTISEMENT

ಉಕ್ರೇನ್‌ ಸರ್ಕಾರವನ್ನು ಬದಲಿಸಲು ರಷ್ಯಾ ಪ್ರಯತ್ನಿಸುತ್ತಿದೆ: ಬ್ರಿಟನ್‌

ಏಜೆನ್ಸೀಸ್
Published 23 ಜನವರಿ 2022, 12:17 IST
Last Updated 23 ಜನವರಿ 2022, 12:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್‌: ಉಕ್ರೇನ್‌ ಸರ್ಕಾರವನ್ನು ಬದಲಿಸಿ ಮಾಸ್ಕೊ ಪರ ಆಡಳಿತವನ್ನು ತರಲು ರಷ್ಯಾ ಪ್ರಯತ್ನಿಸುತ್ತಿದೆ. ಇದಕ್ಕಾಗಿಅದು ಉಕ್ರೇನ್‌ನ ಮಾಜಿ ಶಾಸಕ ಯೆವ್ಹೆನಿ ಮುರಾಯೆವ್ ಅವರನ್ನು ಸಂಭಾವ್ಯ ಅಭ್ಯರ್ಥಿಯಾಗಿ ಪರಿಗಣಿಸಿದೆ ಎಂದು ಬ್ರಿಟನ್‌ ಸರ್ಕಾರ ಆರೋಪಿಸಿದೆ.

ಮುರಾಯೆವ್‌ ರಷ್ಯಾ ಪರ ಸಣ್ಣ ಪಕ್ಷವಾದ ನಾಶಿಯ ಮುಖ್ಯಸ್ಥರಾಗಿದ್ದಾರೆ. ನಾಶಿ ಪಕ್ಷವು ಸದ್ಯ ಉಕ್ರೇನಿನ ಸಂಸತ್ತಿನಲ್ಲಿ ಯಾವುದೇ ಸ್ಥಾನಗಳನ್ನು ಹೊಂದಿಲ್ಲ.

ರಷ್ಯಾದ ಗುಪ್ತಚರ ಸೇವೆಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಹೇಳಿರುವ ಉಕ್ರೇನ್‌ನ ಹಲವಾರು ರಾಜಕಾರಣಿಗಳನ್ನು ಬ್ರಿಟನ್‌ ವಿದೇಶಾಂಗ ಕಚೇರಿ ಶನಿವಾರ ಹೆಸರಿಸಿದೆ.

ADVERTISEMENT

ಗುಪ್ತಚರ ಮಾಹಿತಿಯ ಆಧಾರದ ಮೇಲೆ ಬ್ರಿಟನ್ ಈ ಆರೋಪ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.