ADVERTISEMENT

ತಂಬಾಕು ಎಲೆಯಿಂದ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿದ್ದೇವೆ ಎಂದ ಸಿಗರೆಟ್ ಕಂಪನಿ

ರಾಯಿಟರ್ಸ್
Published 17 ಮೇ 2020, 11:06 IST
Last Updated 17 ಮೇ 2020, 11:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ತಂಬಾಕು ಎಲೆಗಳಿಂದ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಲಾಗಿದ್ದು, ಮಾನವನ ಮೇಲೆ ಪ್ರಯೋಗಕ್ಕೆ ಸಿದ್ಧವಿದೆ ಎಂದು ಸಿಗರೆಟ್ ತಯಾರಿಕಾ ಕಂಪನಿ ‘ಬ್ರಿಟಿಷ್ ಅಮೆರಿಕನ್ ಟೊಬಾಕೊ’ ತಿಳಿಸಿದೆ.

ಕ್ಲಿನಿಕಲ್ ಟ್ರಯಲ್‌ಗೂ ಮೊದಲಿನ ಪ್ರಯೋಗದಲ್ಲಿ ಲಸಿಕೆಯು ಕೊರೊನಾ ವೈರಸ್ ವಿರುದ್ಧ ಸಕಾರಾತ್ಮಕ ಪ್ರತಿರೋಧ ಪ್ರಕ್ರಿಯೆ ಉಂಟುಮಾಡಿದೆ ಎಂದು ಕಂಪನಿ ಹೇಳಿದೆ.

ಅಮೆರಿಕದ ಆಹಾರ ಮತ್ತು ಔಷಧ ಆಡಳಿತದಿಂದ (ಎಫ್‌ಡಿಎ) ಅನುಮತಿ ದೊರೆತ ಕೂಡಲೇ ಮೊದಲ ಹಂತದ ಮಾನವ ಪ್ರಯೋಗ ಆರಂಭಿಸಲಾಗುವುದು ಎಂದೂ ಅದು ಹೇಳಿದೆ. ತಂಬಾಕು ಎಲೆಗಳಿಂದ ಕೊರೊನಾ ಲಸಿಕೆ ಅಭಿವೃದ್ಧಿಪಡಿಸುತ್ತಿರುವುದಾಗಿ ಕಂಪನಿ ಕಳೆದ ತಿಂಗಳು ಹೇಳಿತ್ತು.

ADVERTISEMENT

ಕೊರೊನಾಗೆ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಔಷಧಿ ತಯಾರಿಕಾ ಕಂಪನಿಗಳು ಶ್ರಮಿಸುತ್ತಿವೆ. ಕೆಲವು ಲಸಿಕೆಗಳು ಈಗಾಗಲೇ ಮಾನವ ಪ್ರಯೋಗ ಹಂತದಲ್ಲಿವೆ. ಕೋವಿಡ್–19ಗೆ ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸಲು 12ರಿಂದ 18 ತಿಂಗಳುಗಳೇ ಬೇಕಾಗಬಹುದು ಎಂದು ತಜ್ಞರು ಈಗಾಗಲೇ ಹೇಳಿದ್ದಾರೆ.

ಲಸಿಕೆಯ ಮಾನವ ಪ್ರಯೋಗಕ್ಕೆ ಅನುಮತಿ ಕೋರಿ ಎಫ್‌ಡಿಎಗೆ ಶುಕ್ರವಾರವೇ ಅರ್ಜಿ ಸಲ್ಲಿಸಲಾಗಿದೆ. ವಿಶ್ವದ ಇತರ ರಾಷ್ಟ್ರಗಳ ಅನುಮತಿಯನ್ನೂ ಕೋರಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.