ADVERTISEMENT

ಅವಿಶ್ವಾಸ ಗೆದ್ದ ತೆರೆಸಾ ಮೇ

ಬ್ರೆಕ್ಸಿಟ್ ಒಪ್ಪಂದಕ್ಕೆ ಬ್ರಿಟನ್ ಸಂಸತ್ತಿನಲ್ಲಿ ಸೋಲಾದ ಮುರಿದಿನವೇ ನಡೆದ ಅವಿಶ್ವಾಸ ಗೊತ್ತುವಳಿ

ಪಿಟಿಐ
Published 17 ಜನವರಿ 2019, 17:22 IST
Last Updated 17 ಜನವರಿ 2019, 17:22 IST
ಬ್ರಿಟನ್ ಸಂಸತ್ತಿನಲ್ಲಿ ನಡೆದ ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ಪ್ರಧಾನಿ ತೆರೆಸಾ ಮೇ ಹಾಗೂ ಸಂಸದರು–ರಾಯಿಟರ್ಸ್ ಚಿತ್ರ
ಬ್ರಿಟನ್ ಸಂಸತ್ತಿನಲ್ಲಿ ನಡೆದ ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ಪ್ರಧಾನಿ ತೆರೆಸಾ ಮೇ ಹಾಗೂ ಸಂಸದರು–ರಾಯಿಟರ್ಸ್ ಚಿತ್ರ   

ಲಂಡನ್: ಲೇಬರ್ ಪಕ್ಷ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯಲ್ಲಿ ಬ್ರಿಟನ್ ಪ್ರಧಾನಿ ತೆರೆಸಾ ಮೇ ಜಯಗಳಿಸಿದ್ದಾರೆ.ವಿರುದ್ಧವಾಗಿ306, ಪರವಾಗಿ 325 ಮತ ಚಲಾವಣೆಯಾದವು.

ಬ್ರೆಕ್ಸಿಟ್ ಒಪ್ಪಂದಕ್ಕೆ ಬ್ರಿಟನ್ ಸಂಸತ್ತಿನಲ್ಲಿ ಸೋಲಾದ ಮುರಿದಿನವೇ ನಡೆದ ಅವಿಶ್ವಾಸ ಗೊತ್ತುವಳಿ ಪರೀಕ್ಷೆಯಲ್ಲಿ ತೆರೆಸಾ ಜಯ ಗಳಿಸಿದ್ದಾರೆ.

‘ಸ್ವಹಿತಾಸಕ್ತಿಯನ್ನು ಬದಿಗಿಟ್ಟು, ಬ್ರೆಕ್ಸಿಟ್ ಒಪ್ಪಂದ ಅನುಮೋದನೆಗೆ ರಚನಾತ್ಮಕವಾಗಿ ಕೆಲಸ ಮಾಡಿ’ ಎಂದು ಅವರು ಸಂಸದರಿಗೆ ಮನವಿ ಮಾಡಿದರು. ಬ್ರೆಕ್ಸಿಟ್ ಕಾರ್ಯಸಾಧುವಾಗಿಸಲು ಇರುವ ಎಲ್ಲ ದಾರಿಗಳತ್ತ ಗಮನ ಕೇಂದ್ರೀಕರಿಸಲು ಈ ಗೆಲುವು ಶಕ್ತಿ ಕೊಟ್ಟಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

‘ಐರೋಪ್ಯ ಒಕ್ಕೂಟ ತೊರೆಯುವಂತೆ ಜನಮತಗಣನೆ ಮೂಲಕ ಬ್ರಿಟನ್ ಜನರು ನೀಡಿರುವ ನಿರ್ದೇಶನವನ್ನು ಪಾಲಿಸುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ಅದರತ್ತಲೇ ನನ್ನ ಕೆಲಸ ಕೇಂದ್ರೀಕೃತವಾಗಿದೆ’ ಎಂದು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೇ ಹೇಳಿದ್ದಾರೆ.

ಬ್ರೆಕ್ಸಿಟ್ ಕುರಿತು ವೈಯಕ್ತಿಕವಾಗಿ ಭೇಟಿಯಾಗಿ ಚರ್ಚಿಸಲೂ ಅವರು ಸಂಸದರಿಗೆ ಆಹ್ವಾನ ನೀಡಿದರು. ಸರ್ಕಾರದ ಮೇಲೆ ಸಂಸತ್ ವಿಶ್ವಾಸ ಹೊಂದಿದ್ದು, ಸೋಮವಾರ ತಾವು ಮಂಡಿಸಲಿರುವ ಮತ್ತೊಂದು ಬ್ರೆಕ್ಸಿಟ್ ಪ್ರಸ್ತಾವವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.