ADVERTISEMENT

ಕ್ಯಾಲಿಫೋರ್ನಿಯಾ: ಆತಂಕ ಮೂಡಿಸಿದ ಕಾಡ್ಗಿಚ್ಚು

ಏಜೆನ್ಸೀಸ್
Published 20 ಆಗಸ್ಟ್ 2020, 7:05 IST
Last Updated 20 ಆಗಸ್ಟ್ 2020, 7:05 IST
ಕ್ಯಾಲಿಫೋರ್ನಿಯಾದ ವ್ಯಾಕವಿಲ್ಲೆದಲ್ಲಿ ಕಾಡ್ಗಿಚ್ಚು
ಕ್ಯಾಲಿಫೋರ್ನಿಯಾದ ವ್ಯಾಕವಿಲ್ಲೆದಲ್ಲಿ ಕಾಡ್ಗಿಚ್ಚು   

ಸ್ಯಾನ್‌ಫ್ರಾನ್ಸಿಸ್ಕೊ: ಉತ್ತರ ಕ್ಯಾಲಿಪೋರ್ನಿಯಾದಲ್ಲಿಕೊರೊನಾ ಸೋಂಕಿನ ಜೊತೆಗೆ ಕಾಡ್ಗಿಚ್ಚು, ಹೊಗೆ, ತೀವ್ರ ಉಷ್ಣಾಂಶವು ಜನರಲ್ಲಿ ಆತಂಕ ಮೂಡಿಸಿದೆ.

ಸ್ಯಾನ್ಫ್ರಾನ್ಸಿಸ್ಕೊದ ಕರಾವಳಿ ಪ್ರದೇಶದ ಹಲವೆಡೆ ಬುಧವಾರ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಇದರಿಂದ ನಗರದೆಲ್ಲೆಡೆ ಹೊಗೆ, ಬೂದಿ ಆವರಿಸಿದೆ. ಹಾಗಾಗಿ ಅಶುದ್ಧ ಗಾಳಿಯಿಂದ ಜನರಲ್ಲಿ ಉಸಿರಾಟ ಸಂಬಂಧಿತ ಕಾಯಿಲೆಗಳು ಎದುರಾಗಬಹುದು ಎಂದು ಹೇಳಲಾಗಿದೆ.

ವಾಯು ಮಾಲಿನ್ಯ ಕಡಿಮೆಯಾಗುವ ತನಕ ಜನರು ಮನೆಯ ಕಿಟಿಕಿ, ಬಾಗಿಲುಗಳನ್ನು ಮುಚ್ಚಿ, ಮನೆಯೊಳಗೆ ಸುರಕ್ಷಿತವಾಗಿ ಇರುವಂತೆಜಿಲ್ಲಾ ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ.

ADVERTISEMENT

ಇನ್ನೂ ಸ್ಯಾನ್‌ಫ್ರಾನ್ಸಿಸ್ಕೊದ ಕೆಲ ಪ್ರದೇಶಗಳಲ್ಲಿ ಗುರುವಾರ ಅಶುದ್ಧ ಗಾಳಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಜನಜಂಗುಳಿ ಇರುವ ಕರಾವಳಿ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟದ ಸೂಚ್ಯಂಕ ದ್ವಿಗುಣವಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.