ADVERTISEMENT

ಕ್ಯಾಲಿಫೋರ್ನಿಯಾ ಕಾಡ್ಗಿಚ್ಚು: ಅರಣ್ಯ ಸಮೀಪದಲ್ಲಿ ವಾಸವಿದ್ದವರ ಸ್ಥಳಾಂತರ

ಪಿಟಿಐ
Published 11 ಜುಲೈ 2021, 2:04 IST
Last Updated 11 ಜುಲೈ 2021, 2:04 IST
ಕ್ಯಾಲಿಫೋರ್ನಿಯಾ ಅಗ್ನಿ ಅನಾಹುತದ ಸಾಂದರ್ಭಿಕ ಚಿತ್ರ
ಕ್ಯಾಲಿಫೋರ್ನಿಯಾ ಅಗ್ನಿ ಅನಾಹುತದ ಸಾಂದರ್ಭಿಕ ಚಿತ್ರ   

ಬೆಕ್‌ವರ್ಥ್‌: ಕ್ಯಾಲಿಫೋರ್ನಿಯಾ ಕಾಡ್ಗಿಚ್ಚು 200 ಚದರ ಮೈಲಿ ಅರಣ್ಯವನ್ನು ಆವರಿಸಿದ್ದು, ಅರಣ್ಯಕ್ಕೆ ಸಮೀಪದಲ್ಲಿ ವಾಸಿಸುತ್ತಿದ್ದವರನ್ನು ನೆವಾಡಾಗೆ ಸ್ಥಳಾಂತರ ಮಾಡಲಾಗಿದೆ. ಅಧಿಕ ಉಷ್ಣಾಂಶ ಮತ್ತು ಭಾರಿ ಗಾಳಿಯಿಂದ ಕಾಡ್ಗಿಚ್ಚು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.

ಪ್ಲುಮಾಸ್‌ ರಾಷ್ಟ್ರೀಯ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸಲು ಎರಡು ಸಿಡಿಲು ಕಾರಣವಾಗಿದೆ. ಅತ್ಯಂತ ಅನಾಹುತಕಾರಿಯಾಗಿ ಪರಿವರ್ತನೆಯಾಗಿರುವ ಕಾಡ್ಗಿಚ್ಚಿನಿಂದ ಸಂಭವಿಸಬಹುದಾದ ದುರಂತವನ್ನು ತಪ್ಪಿಸಲು ನಾಗರಿಕರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅಗ್ನಿ ಮಾಹಿತಿ ಅಧಿಕಾರಿ ಲಿಸಾ ಕೊಕ್ಸ್‌ ತಿಳಿಸಿದ್ದಾರೆ.

ಗಾಳಿಯು ಗಂಟೆಗೆ 32 ಕಿ.ಮೀ ವೇಗದಲ್ಲಿ ಬೀಸುತ್ತಿದ್ದು, ಪ್ಲುಮಾಸ್‌ ರಾಷ್ಟ್ರೀಯ ಅರಣ್ಯದಿಂದ 200 ಚದರ ಮೈಲಿ ವ್ಯಾಪ್ತಿಯಲ್ಲಿರುವ ಎಲ್ಲರನ್ನು ಸ್ಥಳಾಂತರ ಮಾಡಲಾಗಿದೆ. ನೂರಾರು ಮನೆಗಳು ಹಾಗೂ ಕ್ಯಾಂಪ್‌ಗ್ರೌಂಡ್‌ಗಳು ಅಗ್ನಿಗೆ ಆಹುತಿಯಾಗುವ ಅಂಚಿನಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.