ADVERTISEMENT

Photos| ಕ್ಯಾಲಿಫೋರ್ನಿಯಾದಲ್ಲಿ ಇತಿಹಾಸದಲ್ಲೇ ಭೀಕರ ಕಾಳ್ಗಿಚ್ಚು

ಸ್ಯಾನ್‌ ಫ್ರಾನ್ಸಿಸ್ಕೊ (ಎಪಿ): ಉತ್ತರ ಕ್ಯಾಲಿಪೋರ್ನಿಯಾದಲ್ಲಿ ಕೊರೊನಾ ಸೋಂಕಿನ ಜೊತೆಗೆ ಕಾಡ್ಗಿಚ್ಚು, ಹೊಗೆ, ತೀವ್ರ ಉಷ್ಣಾಂಶವು ಜನರಲ್ಲಿ ಆತಂಕ ಮೂಡಿಸಿದೆ. ಸಿಡಿಲಿನ ಸ್ಪೋಟದಿಂದ ಉದ್ಭವಿಸಿರುವ ಬೆಂಕಿ ಶುಕ್ರವಾರ ಮತ್ತಷ್ಟು ವ್ಯಾಪಿಸಿದೆ.2,020 ಚದರ ಕಿಲೋ ಮೀಟರ್‌ ಆವರಿಸಿರುವ ಬೆಂಕಿಯನ್ನು ಆರಿಸಲುವಿಮಾನ, ಹೆಲಿಕಾಪ್ಟರ್‌ ಸಹಿತ 12,000 ಅಗ್ನಿಶಾಮಕ ನಿಯೋಜನೆಗೊಂಡಿವೆ. ಇದಕ್ಕೆ ಈ ವರೆಗೆ ಐವರು ಬಲಿಯಾಗಿದ್ದಾರೆ.ಈಗಾಗಲೇ ಸಾವಿರಾರು ವನ್ಯಜೀವಿಗಳು, ಜಾನುವಾರುಗಳು ಕಾಳ್ಗಿಚ್ಚಿಗೆ ಪ್ರಾಣ ತೆತ್ತಿವೆ. ಈ ವರೆಗೆ 1,40,000 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. 500 ಮನೆಗಳು ಸುಟ್ಟು ಭಸ್ಮವಾಗಿವೆ.ಸ್ಯಾನ್‌ ಫ್ರಾನ್ಸಿಸ್ಕೊದ ಕರಾವಳಿ ಪ್ರದೇಶದ ಹಲವೆಡೆ ಬುಧವಾರ ಮೊದಲ ಬಾರಿಗೆ ಕಾಡ್ಗಿಚ್ಚು ಕಾಣಿಸಿಕೊಂಡಿತು, ಇದರಿಂದ ನಗರದೆಲ್ಲೆಡೆ ಹೊಗೆ, ಬೂದಿ ಆವರಿಸಿದೆ. ಹಾಗಾಗಿ ಅಶುದ್ಧ ಗಾಳಿಯಿಂದ ಜನರಲ್ಲಿ ಉಸಿರಾಟ ಸಂಬಂಧಿತ ಕಾಯಿಲೆಗಳು ಎದುರಾಗಬಹುದು ಎಂದು ಹೇಳಲಾಗಿದೆ.ವಾಯು ಮಾಲಿನ್ಯ ಕಡಿಮೆಯಾಗುವ ತನಕ ಜನರು ಮನೆಯ ಕಿಟಿಕಿ, ಬಾಗಿಲುಗಳನ್ನು ಮುಚ್ಚಿ, ಮನೆಯೊಳಗೆ ಸುರಕ್ಷಿತವಾಗಿ ಇರುವಂತೆ ಜಿಲ್ಲಾ ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ.ಇನ್ನೂ ಸ್ಯಾನ್‌ ಫ್ರಾನ್ಸಿಸ್ಕೊದ ಕೆಲ ಪ್ರದೇಶಗಳಲ್ಲಿ ಗುರುವಾರ ಅಶುದ್ಧ ಗಾಳಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಜನಜಂಗುಳಿ ಇರುವ ಕರಾವಳಿ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟದ ಸೂಚ್ಯಂಕ ದ್ವಿಗುಣವಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2020, 4:14 IST
Last Updated 22 ಆಗಸ್ಟ್ 2020, 4:14 IST
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.