ADVERTISEMENT

ಪಾಕ್ ಪ್ರಧಾನಿ ಶೆಹಬಾಜ್‌, ಕಾಂಬೋಡಿಯಾ ಪ್ರಧಾನಿ ಹುನ್‌ ಸೇನ್‌ಗೆ ಕೋವಿಡ್ ದೃಢ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 12:59 IST
Last Updated 15 ನವೆಂಬರ್ 2022, 12:59 IST
ಶಹಬಾಜ್‌ ಷರೀಫ್ 
ಶಹಬಾಜ್‌ ಷರೀಫ್    

ಇಸ್ಲಾಮಾಬಾದ್‌/ ನುಸಾ ದುವಾ (ಇಂಡೋನೇಷ್ಯಾ) (ಪಿಟಿಐ/ ಎಪಿ): ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್ ಮತ್ತುಕಾಂಬೋಡಿಯಾ ಪ್ರಧಾನಿ ಹುನ್‌ ಸೇನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಶೆಹಬಾಜ್ ಅವರು ಲಂಡನ್‌ ಭೇಟಿ ಮುಗಿಸಿ ವಾಪಸ್‌ ಬಂದ ನಂತರ ಅವರಿಗೆ ಸೋಂಕು ದೃಢಪಟ್ಟಿದೆ. ಕಳೆದ ಎರಡು ದಿನಗಳಿಂದ ಅವರು ಅನಾರೋಗ್ಯಕ್ಕೀಡಾಗಿದ್ದರು. ಕೋವಿಡ್‌ ಪರೀಕ್ಷೆ ಮಾಡಿಸಿದಾಗ ಸೋಂಕು ದೃಢಪಟ್ಟಿದೆ ಎಂದು ಮಾಹಿತಿ ಸಚಿವ ಮರಿಯುಂ ಔರಂಗಜೇಬ್ ಮಂಗಳವಾರ ತಿಳಿಸಿದ್ದಾರೆ. ಈ ಮೂಲಕ ಶೆಹಬಾಜ್‌ ಅವರಿಗೆ ಮೂರನೇ ಬಾರಿ ಕೊರೊನಾ ಸೋಂಕು ದೃಢಪಟ್ಟಿದೆ.

ಇನ್ನು ಈ ಕುರಿತು ಫೇಸ್‌ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿರುವಕಾಂಬೋಡಿಯಾ ಪ್ರಧಾನಿ ಹುನ್ ಸೇನ್‌, ‘ಸೋಮವಾರ ರಾತ್ರಿ ಸೋಂಕು ದೃಢಪಟ್ಟಿದೆ. ಹೀಗಾಗಿ ಬಾಲಿಯಲ್ಲಿ ನಡೆಯುತ್ತಿರುವ ಜಿ–20 ಶೃಂಗಸಭೆಯಲ್ಲಿ ಪಾಲ್ಗೊಳ್ಳದೆ ಕಾಂಬೋಡಿಯಾಗೆ ವಾಪಸ್ ಹೋಗುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.