ADVERTISEMENT

ಬ್ರಿಟನ್‌ ರಾಣಿಯಾಗಲಿದ್ದಾರೆ ರಾಜಕುಮಾರಿ ಕೆಮಿಲಾ: ಎರಡನೇ ಎಲಿಜಬೆತ್‌ ಸಂದೇಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2022, 2:46 IST
Last Updated 6 ಫೆಬ್ರುವರಿ 2022, 2:46 IST
ರಾಜಕುಮಾರ್‌ ಚಾರ್ಲ್ಸ್‌ ಮತ್ತು ರಾಜಕುಮಾರಿ ಕೆಮಿಲಾ
ರಾಜಕುಮಾರ್‌ ಚಾರ್ಲ್ಸ್‌ ಮತ್ತು ರಾಜಕುಮಾರಿ ಕೆಮಿಲಾ   

ಲಂಡನ್‌: ವೇಲ್ಸ್‌ನ ರಾಜಕುಮಾರಿ ಅಥವಾ ಡಚ್ಚಸ್‌ ಆಫ್‌ ಕಾರ್ನ್‌ವಾಲ್‌ ಆಗಿರುವ ಕೆಮಿಲಾ ಅವರು ಬ್ರಿಟನ್‌ನ ರಾಣಿ ಆಗಲಿದ್ದಾರೆ. ರಾಜಕುಮಾರ ಚಾರ್ಲ್ಸ್‌ ಅವರು ರಾಜನ ಪಟ್ಟಕ್ಕೆ ಏರುತ್ತಿದ್ದಂತೆ ರಾಜಕುಮಾರಿ ಕೆಮಿಲಾ ರಾಣಿಯಾಗಲಿದ್ದಾರೆ ಎಂದು ಬ್ರಿಟನ್‌ನ ರಾಣಿ ಎರಡನೇ ಎಲಿಜಬೆತ್‌ (95) ಪ್ರಕಟಿಸಿದ್ದಾರೆ.

ರಾಣಿಯಾಗಿ ಅಧಿಕಾರ ವಹಿಸಿ 70 ವರ್ಷಗಳು ಸಂದಿರುವ ಸಂದರ್ಭದಲ್ಲಿ ಎರಡನೇ ಎಜಿಜಬೆತ್‌ ಅವರು ಕೆಮಿಲಾ ಅವರನ್ನು ರಾಣಿಯಾಗಿ ಘೋಷಿಸಿರುವ ಸಂದೇಶ ನೀಡಿದ್ದಾರೆ.

ತಮ್ಮ ಸೊಸೆ ಕೆಮಿಲಾ (74) ಮೇಲೆ ನಿರೀಕ್ಷೆ ವ್ಯಕ್ತಪಡಿಸಿರುವ ಎಲಿಜಬೆತ್‌, ಚಾರ್ಜ್‌ ರಾಜನಾಗುತ್ತಿದ್ದಂತೆ ಕೆಮಿಲಾ ರಾಣಿಯ ಸ್ಥಾನ ಅಲಂಕರಿಸಲಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT
ಬ್ರಿಟನ್‌ನ ರಾಣಿ ಎರಡನೇ ಎಲಿಜಬೆತ್‌

ಈ ಸಂಬಂಧ ಲಿಖಿತ ಸಂದೇಶ ಪ್ರಕಟಿಸಿರುವ ರಾಣಿ ಎರಡನೇ ಎಲಿಜಬೆತ್‌, 'ನಿಮ್ಮೆಲ್ಲರ ಸಹಕಾರಕ್ಕೆ ನನ್ನ ಧನ್ಯವಾದಗಳು. ನೀವು ತೋರಿರುವ ಪ್ರೀತಿ ಮತ್ತು ನಿಷ್ಠೆಗೆ ಆಭಾರಿಯಾಗಿರುವೆ. ಮುಂದೆ ನನ್ನ ಮಗ ಚಾರ್ಲ್ಸ್‌ ರಾಜನಾದ ನಂತರ, ಅವರು ಮತ್ತು ಅವರ ಪತ್ನಿ ಕೆಮಿಲಾ ಅವರಿಗೆ ನೀವು ಪೂರ್ಣ ಸಹಕಾರ ನೀಡುವ ನಂಬಿಕೆ ಇದೆ; ಹಾಗೆಯೇ ರಾಜ ಕಾರ್ಯಗಳಲ್ಲಿ ನಿರತರಾಗಿರುವ ಕೆಮಿಲಾ ಅವರು ರಾಣಿಯಾಗಲಿದ್ದಾರೆ,' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.